Ad imageAd image

ಮೊಟ್ಟೆ ಉತ್ತಮ ಪೌಷ್ಟಿಕಾಂಶ ಇರುವ ಆಹಾರ ಮಕ್ಕಳಿಗೆ ತುಂಬಾ ಸಹಕಾರಿಯಾಗುತ್ತದೆ.. ಎನ್ ವೈ ಗೋಪಾಲಕೃಷ್ಣ.

Bharath Vaibhav
ಮೊಟ್ಟೆ ಉತ್ತಮ ಪೌಷ್ಟಿಕಾಂಶ ಇರುವ ಆಹಾರ ಮಕ್ಕಳಿಗೆ ತುಂಬಾ ಸಹಕಾರಿಯಾಗುತ್ತದೆ.. ಎನ್ ವೈ ಗೋಪಾಲಕೃಷ್ಣ.
WhatsApp Group Join Now
Telegram Group Join Now

ಮೊಳಕಾಲ್ಮೂರು:-ಸರ್ಕಾರಿ ಶಾಲೆಯಲ್ಲಿ ಓದಿದವರು ತುಂಬಾ ಉನ್ನತ ಮಟ್ಟದ ಶಿಕ್ಷಣ ಪಡೆದು ಮಹನೀಯರಾಗಿದ್ದಾರೆ ಅವರ ಸಾಲಿನಲ್ಲಿ ನೀವು ನಡೆಯಿರಿ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣ ತಿಳಿಸಿದರು.

 

 

ಮೊಳಕಾಲ್ಮೂರು ತಾಲೂಕಿನ ರಾಂಪುರದ ಶ್ರೀ ಗಡ್ಡೆ ವೀರಭದ್ರಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶುಕ್ರವಾರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿ ಮಾತನಾಡಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ..ರಾಜ್ಯ ಸರ್ಕಾರ ಅಕ್ಷರ ದಾಸೋಹ -ಮಧ್ಯಾಹ್ನ ಉಪಹಾರ ಯೋಜನೆಯಡಿ.. ಅಜೀಂ ಪ್ರೇಮ್ ಜಿ ಫೌಂಡೇಶನ್ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು.

*2024 25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪೂರ್ವ ಪ್ರಾಥಮಿಕ, ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಿಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಸೌಲಭ್ಯಗಳು ಇಲ್ಲದೆ ನಮ್ಮ ಪೂರ್ವಿಕರು ಸರ್ಕಾರಿ ಶಾಲೆಯಲ್ಲಿ ಓದಿ ಮಹನೀಯರಾಗಿದ್ದಾರೆ.. ಅಂತಹ ಮಹನೀಯರು ನಡೆದಂತಹ ಸಾಲಿನಲ್ಲಿ ನೀವು ನಡೆಯಬೇಕಿದೆ ಮಕ್ಕಳಿಗೆ ಕಿವಿಮಾತು ತಿಳಿಸಿದರು .

ದೇಶಕ್ಕೆ ಇಂದಿನ ಮಕ್ಕಳೇ ಮುಂದಿನ ಅಮೂಲ್ಯ ಆಸ್ತಿ ಅವರ ಶಿಕ್ಷಣ ದೇಶಕ್ಕೆ ಮಹಾನ್ ಸಂಪತ್ತು ಎಂದು ಹರಿತ ಇಂದಿನ ಸರ್ಕಾರಗಳು … ಸರ್ಕಾರಿ ಶಾಲೆಗಳಿಗೆ ಹಲವಾರು ಸೌಲಭ್ಯ ಕಾರ್ಯಕ್ರಮಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ನೀವು ಸಾಗಿದಾಗ ಮಾತ್ರ ನಿಮ್ಮ ತಂದೆ ತಾಯಿಗಳಿಗೆ ಮತ್ತು ಸಮಾಜಕ್ಕೆ ನೀಡಬಹುದಾದ ಮಹಾನ್ ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯ ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ನಿರ್ಮಲಾ ದೇವಿ ಮಾತನಾಡಿ ಮಧ್ಯಾಹ್ನದ ಉಪಹಾರವನ್ನು ಜಾರಿಗೆ ತಂದು ಸರ್ಕಾರ ಮಕ್ಕಳಿಗೆ ಅನೇಕ ಯೋಜನೆಗಳನ್ನು ತಂದಿದೆ ಅದರಲ್ಲೂ ಮೊಟ್ಟೆ ವಿತರಣೆ ಮಾಡುವುದು ಮಕ್ಕಳಿಗೆ ತುಂಬಾ ಸಹಕಾರಿಯಾಗುತ್ತದೆ. ಈ ಯೋಜನೆಯಲ್ಲಿ ಆರು ದಿನಗಳ ಕಾಲ ಮೊಟ್ಟೆಗಳನ್ನು ವಿತರಣೆ ಮಾಡುತ್ತಾರೆ ಇದರ ಉಪಯೋಗ ಎಲ್ಲರೂ ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ವೆಂಕಟೇಶ್ …ಅಕ್ಷರ ದಾಸೋಹ ತಾಲೂಕ ಅಧಿಕಾರಿಗಳಾದ ಪಾತಲಿಂಗಪ್ಪ.. ತಾಲೂಕು ಪಶುಸಂಗೋಪನ ಇಲಾಖೆ ಅಧಿಕಾರಿಗಳಾದ ರಂಗಪ್ಪ ..ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಪಾಲಯ್ಯ ..ರಾಂಪುರ ಗ್ರಾಮ್ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ.. ಅಲ್ಲದೆ ಗ್ರಾಮ ಪಂಚಾಯತಿ ಸದಸ್ಯರು.. ತಾಲೂಕು ಮಟ್ಟದ ಅಧಿಕಾರಿಗಳು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!