Ad imageAd image

ಹಚ್ಚೊಳ್ಳಿ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದಿಂದ ಚುನಾವಣಾ ಪ್ರಚಾರ

Bharath Vaibhav
ಹಚ್ಚೊಳ್ಳಿ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದಿಂದ ಚುನಾವಣಾ ಪ್ರಚಾರ
WhatsApp Group Join Now
Telegram Group Join Now

ಸಿರುಗುಪ್ಪ : –ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ್ ಅವರು ಮಂಗಳವಾರದಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ರ‍್ಯಾಲಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಯುವಕರು ಬೃಹತ್ ಮಟ್ಟದಲ್ಲಿ ಭಾಗಿಯಾಗಬೇಕೆಂದು ಸಚಿವ ಶಿವರಾಜ್ ತಂಗಡಗಿ ಅವರು ಕಾರ್ಯಕರ್ತರಿಗೆ ತಿಳಿಸಿದರು.

ತಾಲೂಕಿನ ಹಚ್ಚೊಳ್ಳಿ ಗ್ರಾಮದ ಶ್ರೀ ಮಾರೆಮ್ಮ ದೇವಸ್ಥಾನದ ಆವರಣದಲ್ಲಿ ಕಾಂಗ್ರೇಸ್ ಪಕ್ಷದಿಂದ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಂದಿರುವ ಪಕ್ಷವನ್ನು ಸೋಲಿಸಿ ಗ್ಯಾರಂಟಿಗಳನ್ನು ಗೆಲ್ಲಿಸಲು ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕೆಂದರು.

ದೇಶದಲ್ಲಿ ವಿರೋಧ ಪಕ್ಷದ ನಾಯಕರನ್ನು ಇ.ಡಿ. ಐ.ಟಿ. ಇಲಾಖೆಗಳಿಂದ ಎದುರಿಸಿ ಹತ್ತಿಕ್ಕಲಾಗುತ್ತಿದೆ. ತಮ್ಮ ಪಕ್ಷವನ್ನು ಸೇರ್ಪಡೆಗೊಂಡವರಿಗೆ ಕ್ಲೀನ್ ಚಿಟ್ ನೀಡುತ್ತಿದ್ದು, ಮೊನ್ನೆ ತಾನೇ ಪಕ್ಷವನ್ನು ಸೇರಿದವರನ್ನು ವಾಷಿಂಗ್ ಪೌಡರ್ ನಿರ್ಮಾ ಕಂಪನಿಯಂತೆ ಹಳೆಯ ಹಗರಣಗಳನ್ನೆಲ್ಲಾ ಸ್ವಚ್ಛಗೊಳಿಸಿಬಿಟ್ಟರೆಂದು ಜನಾರ್ಧನರೆಡ್ಡಿಯವರನ್ನ ಕಾಲೆಳೆದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯೆಂದು ಘೋಷಣೆಯಾಗಿರುವ ರಾಜಶೇಖರ ಹಿಟ್ನಾಳ್ ಅವರು ಮಾತನಾಡಿ ಕೃಷಿ ಚಟುವಟಿಕೆಗಾಗಿ ರೈತರು ಖರೀದಿಸುವ ಯಂತ್ರಗಳು, ರಸಗೊಬ್ಬರಗಳಿಗೆ ಜಿ.ಎಸ್.ಟಿ ಮುಕ್ತವಾಗಿಸುವುದಾಗಿ ನಮ್ಮ ಪಕ್ಷ ಭರವಸೆಯನ್ನು ನೀಡುತ್ತಿದೆ.

ಇದೇ ವೇಳೆ ಶಾಸಕರಾದ ಬಿ.ಎಮ್.ನಾಗರಾಜ, ಹಂಪನಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಟ್ಟೂರು ಕರಿಬಸಪ್ಪ, ಮುಖಂಡರಾದ ಚೊಕ್ಕ ಬಸವನಗೌಡ, ರಾಮಸ್ವಾಮಿ ಸಾಹುಕಾರ, ವಕೀಲರಾದ ಗಂಗಾರಾಮ್ ಸಿಂಗ್, ತಿಮ್ಮಯ್ಯನಾಯಕ, ಇನ್ನಿತರರಿದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!