ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರ ಚುನಾವಣೆ ಪ್ರಚಾರ :ಚಾಮರಾಜನಗರ
ಚಾಮರಾಜನಗರ. ಕೊಳ್ಳೇಗಾಲ ತಾಲೂಕಿನಲ್ಲಿ ಚಾಮರಾಜನಗರ ಜಿಲ್ಹಾ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರ ಚುನಾವಣೆ ಪ್ರಚಾರವನ್ನು ಕೊಳ್ಳೇಗಾಲ ತಾಲೂಕಿನದ್ಯಾತ ವೀರಶೈವ ಮುಖಂಡರು ಹಾಗೂ ಮಹಾ ಸಭಾದ ನಿರ್ದೇಶಕರು ಚುನಾವಣ ಪ್ರಚಾರ ನೆಡೆಸಿದರು.
ಈ ವೇಳೆ ಅಭ್ಯರ್ಥಿ ನಂದೀಶ್ ರವರು ಮಾತಾಡಿ ವೀರಶೈವ ಮಹಾಸಭಾದ ಚುನಾವಣೆಗೆ ಈಗಾಗಲೇ ನಾನು ಸ್ಪರ್ದಿಸಿದ್ದು ಕಳೆದ 9 ಬಾರಿ ಯಿಂದ 6ಬಾರಿ ತಾಲೋಕು ಅಧ್ಯಕ್ಷರಾಗಿ ಕೆಲ್ಸಮಾಡಿದ್ದೇನೆ. 3ವರ್ಷ ಜಿಲ್ಲಾಧ್ಯಕ್ಷರಾಗಿ ಕೆಲಸಮಾಡಿದ್ದೇನೆ, 2ವರ್ಷ ಕೋವಿಡ್ ಸಮಯದಲ್ಲಿ ಸಮಾಜದ ಕಷ್ಟಗಳಿಗೆ ಸ್ಪಂದಿಸಿದ್ದೇನೆ 1ವರ್ಷ ಬಸವ ಭವನ ಗುದ್ದಲಿ ಪೂಜೆಯನ್ನು ಮಾಡಿದ್ದೇನೆ.
ಇಲ್ಲಿಯತನಕ ಸಮಾಜದ ಕೆಲಸಗಳನ್ನು ಮಾಡಿ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಮುಂದಿನ ಐದು ವರ್ಷ ಅವಧಿಗೆ ನಾನು ಅಚ್ಚುಕಟ್ಟಾಗಿ ಸಮಾಜ ಸೇವೆಯನ್ನು ಮಾಡುತ್ತೇನೆ, ಸಮಾಜದ ಕೆಲಸ ಕಾರ್ಯಗಳನ್ನು ಮಾಡಿ, ಎಲ್ಲಾ ತಾಲೋಕು ಅಧ್ಯಕ್ಷರು ಹಾಗೂ ನಿರ್ದೇಶಕರ ಜೊತೆಗೂಡಿ ಸಮಾಜದ ಒಳಿತಿಗಾಗಿ, ಈ ಬಾರಿಯು ಸಹಾ ಅವಕಾಶ ನೀಡಿ ನನ್ನ ಕ್ರಮ ಸಂಖ್ಯೆ ಎರಡಕ್ಕೆ ಮತ ನೀಡುವಮೂಲಕ ನನ್ನನು ಜಯಶೀಲನಾಗಿ ಮಾಡಬೇಕೆಂದು ತಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ತಾಲೂಕಿನ ವೀರಶೈವ ಮುಖಂಡರು, ಯಳಂದೂರು ತಾಲೋಕು ನಿರ್ದೇಶಕರು ಹಾಗೂ ಯುವಕರು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ