ಕೋಲ್ಕತ್ತಾ: ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ ಕ್ರಿಕೆಟಿಗ ಮೊಹ್ಮದ ಶೆಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಚುನಾವಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಜಾಧವಪುರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟೀಂ ಇಂಡಿಯಾ ಆಟಗಾರ ಮೊಹ್ಮದ ಶೆಮಿ ಹಾಗೂ ಅವರ ಸಹೋದರ ಮೊಹ್ಮದ್ ಕೈಫ್ ತಿಳಿಸಲಾಗಿತ್ತು. ಆದರೆ ಮೊಹ್ಮದ ಶೆಮಿ ಅವರು ರಾಜಕೋಟ್ ನಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಂಡ ಕಾರಣಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ.
ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಂಡ ಕಾರಣಕ್ಕೆ ಬೇರೆ ದಿನದಂದು ವಿಚಾರಣೆಗೆ ಹಾಜರಾಗುವುದಾಗಿ ಶೆಮಿ ತಿಳಿಸಿದ್ದರು. ಆ ಕಾರಣಕ್ಕೆ ಚುನಾವಣೆ ಆಯೋಗ ಇದೀಗ ಶೆಮಿ ಅವರಿಗೆ ಜನವರಿ ೯ ರಿಂದ ಹಿಡಿದು ೧೧ ದಿನಾಂಕದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಉತ್ತರ ಪ್ರದೇಶದ ಮೂಲದ ಕ್ರಿಕೆಟಿಗ ಕ್ರಿಕೆಟ್ ವೃತ್ತಿ ಜೀವನಕ್ಕಾಗಿ ಇದೀಗ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾರೆ. ಅವರು ಕೋಲ್ಕತ್ತಾದ ವರ‍್ಡ್ ವೊಂದರ ಮತದಾರರೂ ಆಗಿದ್ದಾರೆ. ಆದರೆ ಶೆಮಿ ಅವರ ಸಹೋದರ ಗಣತಿ ನಮೂನೆಯನ್ನು ತಪ್ಪಾಗಿ ನಮೂದಿಸಿರುವುದರಿಂದ ಶೆಮಿ ವಿಚಾರಣೆಗೆ ಹಾಜರಾಗಬೇಕಿದೆ.
ಮತದಾರರ ಪಟ್ಟಿ ಪರಿಷ್ಕರಣೆ: ವಿಚಾರಣೆಗೆ ಹಾಜರಾಗಲು ಚುನಾವಣೆ ಆಯೋಗದಿಂದ ಶೆಮಿಗೆ ಸೂಚನೆ




