ಬಸವನ ಬಾಗೇವಾಡಿ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. LT ಉಪ್ಪಲ್ಲದಿನ್ನಿ ಶಾಲೆಯಲ್ಲಿ ವೋಟಿಂಗ್ ಮಷೀನ್ ಆಪ್ ಬಳಸಿ ಶಾಲಾ ಸಂಸತ್ತು ಚುನಾವಣೆ ಆಯ್ಕೆ ಮಾಡಲಾಯಿತು.
ಮಕ್ಕಳಲ್ಲಿ ಚುನಾವಣೆಯ ಪ್ರಕ್ರಿಯೆಯ ಬಗ್ಗೆ ಹಾಗೂ ಚುನಾವಣಾ ಹಂತಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಆಯ್ಕೆಯಾದವರು ಏನಿಲ್ಲ ಕರ್ತವ್ಯಗಳ್ಳನ್ನು ನಿರ್ವಹಿಸಬೇಕು ಎಂಬುದರ ಕುರಿತಾಗಿ ಮಾಹಿತಿ
ಹಂಚಿಕೊಳ್ಳಲಾಯಿತು.

3ರಿಂದ 8ನೇ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸರದಿ ಸಾಲಿನಲ್ಲಿ ನಿಂತು , ಹುರುಪಿನಿಂದ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಂ ಎನ್ ನಾಯಕ್ PRO ಆಗಿ , ಶ್ರೀ ಮತಿ U I ಭರಮಗೌಡರ ಇವರು APRO ಆಗಿ , ಶ್ರೀ ಮತಿ ಪ್ರಿಯಾಂಕ ಭಿಂಗೆ , ಕೊಟ್ರೇಶ್ ಹೆಗ್ಡಾಳ , ಪ್ರಕಾಶ್ ಕೊಂಡಿಕೊಪ್ಪದವರ , R D ಪವಾರ್ ಇವರು P O , ಆಗಿ ಕರ್ತವ್ಯ ನಿರ್ವಹಿಸಿದರು.

ಇದೇ ಸಮಯದಲ್ಲಿ ಶಾಲೆಯ ಎಲ್ಲ ಮಕ್ಕಳು ಗುರುಗಳು ಗುರುಮಾತೆಯರು ಭಾಗವಹಿಸಿದ್ದರು.




