ಸೇಡಂ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸೇಡಂ ತಾಲೂಕಿನ ಪಧಾಧಿಕಾರಿಗಳ ಆಯ್ಕೆ ಪ್ರತಿಕ್ರಿಯೆ ಗುರಮಠಕಲ್ ಪಟ್ಟಣದ ಅತಿಥಿ ಗೃಹದಲ್ಲಿ ನೇರವೆರಿತು ರಾಜ್ಯ ಉಪಾಧ್ಯಕ್ಷ ಲಕ್ಷ್ಮೀ ಎಂ ಪಾಟೀಲ ಮದ್ದರಕಿ ಆದೇಶದ ಅನ್ವಯ ವಿತರಣೆ ಮಾಡಿದರು.
ಗುರಮಠಕಲ್ ತಾಲೂಕ ಅಧ್ಯಕ್ಷ ಮಾತಾನಾಡಿ ಗಡಿ ತಾಲೂಕಿನಲ್ಲಿರುವ ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಸೇಡಂ ತಾಲೂಕಿನ ರೈತರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ರೈತರಿಗೆ ಅನ್ಯಾಯವಾದರೆ ಸಹಿಸದೇ ಸರಿಪಡಿಸುವ ಕೇಲಸ ಮಾಡಲು ಹೇಳಿದರು,
ನೂತನ ಪದಾಧಿಕಾರಿಗಳ ಜೊತೆಗೆ ಸದಾ ಇರುವುದಾಗಿ ಹೇಳಿದರು. ರೈತರಿಗೆ ನ್ಯಾಯ ದೊರಕಿಸಲು ನಾವು ಸದಾ ಸಿದ್ಧರಾಗಿರಬೇಕು. ರೈತರ ಸಮಸ್ಯೆಗೆ ಯಾರು ಸ್ಪಂದನೆ ನೀಡುವವರಿಲ್ಲ ನಮಗೆ ನಾವೇ ಸರಿಪಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಸಂತರೆಡ್ಡಿ, ಉಪಾಧ್ಯಕ್ಷ ಭೀಮು, ಕೊಂಕಲ್ ಹೋಬಳಿ ಅಧ್ಯಕ್ಷ ವೆಂಕಟೇಶ್ ಇದ್ದರು.
ನೂತನ ಪದಾಧಿಕಾರಿಗಳು: ಸೇಡಂ ತಾಲೂಕು ಅಧ್ಯಕ್ಷರಾಗಿ ಕೆ.ಮೊಗುಲಪ್ಪ ಇಟಕಾಲ್, ಪ್ರಧಾನ ಕಾರ್ಯದರ್ಶಿ ಭೀಮಶಪ್ಪ, ಉಪಾಧ್ಯಕ್ಷರಾಗಿ ಅನೀಲ ಪಿ, ಗುರುನಾಥ ಹೆಚ್, ಕಾರ್ಯದರ್ಶಿ ಮಾರುತಿ, ಖಜಾಂಚಿ ನರಹರಿ, ಸಹ ಕಾರ್ಯದರ್ಶಿಗಳಾಗಿ ಲಾಲಪ್ಪ, ಇಮ್ರಾನ್ ಇವರು ಆಯ್ಕೆ ಮಾಡಲಾಯಿತು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್