ಚಿಟಗುಪ್ಪ:-2024 ರಿಂದ 2029ರ ಐದು ವರ್ಷದ ಅವಧಿಗಾಗಿ ರಾಜ್ಯ ಸರ್ಕಾರಿ ನೌಕರರ ಚಿಟಗುಪ್ಪ ತಾಲ್ಲೂಕು ಸಂಘದ ನಿರ್ದೇಶಕರ ಆಯ್ಕೆಗಾಗಿ ಸೋಮವಾರ ಪಟ್ಟಣದ ಕನ್ಯಾ ಪ್ರೌಢ ಶಾಲೆಯಲ್ಲಿ ಚುನಾವಣೆ ಜರುಗಿತ್ತು.
ರಾಜ್ಯ ಸರ್ಕಾರಿ ನೌಕರರ ಚಿಟಗುಪ್ಪ ತಾಲ್ಲೂಕು ಸಂಘಕ್ಕೆ ಎಲ್ಲಾ ಇಲಾಖೆಗಳಿಂದ 17 ನಿರ್ದೇಶಕರ ಆಯ್ಕೆ ಮಾಡಬೇಕಿದ್ದು,ಅದರಲ್ಲಿ 13 ನಿರ್ದೇಶಕರ ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದಂತೆ 4 ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದು ಅದಕ್ಕಾಗಿ 9 ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಇದ್ದಿದರಿಂದ ಅಕ್ಟೋಬರ್ 28 ಸೋಮವಾರ ಜಿದ್ದಾಜಿದ್ದಿ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಶಿಕ್ಷಣ ಇಲಾಖೆಯಿಂದ,ಮಹೇಂದ್ರಕುಮಾರ,ಚಂದ್ರಶೇಟ್ಟಿ ಚೌವ್ಹಾಣ,ರಾಜಶೇಖರ್ ಉಪ್ಪಿನ್ ಗೆಲವು ಸಾದಧಿಸಿದರೇ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಅಮೃತರಾವ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಗೆಲವು ಸಾಧಿಸಿದ ಮಹೇಂದ್ರಕುಮಾರ ಮತ್ತು ಚಂದ್ರಶೇಟ್ಟಿ ಚೌವ್ಹಾಣ ಪೆನಾಲ್ ಬೆಂಬಲಿಗರಿಂದ ಸಂಭ್ರಮಾಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಗುರು ವಿಠ್ಠಲರೆಡ್ಡಿ ಶಿಕ್ಷಕರಾದ ನಾಗಪ್ಪ,ಶಾಮರಾವ,ಮಹೇಶ,ನಾಗಶೆಟ್ಟಿ,ಚಂದ್ರಶೇಟ್ಟಿ,ಕಸ್ತೂರಿ,ನರಸಮ್ಮ,ಈಶ್ವರ,ಸುಭಾಷ,ಬಸಪ್ಪ, ಅಂಬಾಜಿ,ರಾಜಪ್ಪ,ಝರನಪ್ಪ ಸೇರಿ ಅನೇಕರು ಇದ್ದರು.
ವರದಿ:-ಸಜೀಶ




