ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ನಿಸರ್ಗ ಶಾಲಾ ಪುಟ್ಟ ಮಕ್ಕಳ ಆಟಕ್ಕೆ ಎಲೆಕ್ಟ್ರಿಕಲ್ ಟ್ರೈನ್- ಹೆಚ್ ಎನ್ ಗಂಗಾಧರ್ ಮಕ್ಕಳ ಪಾಠದ ಪ್ರವಚನ ಜೊತೆಗೆ ಆಟಕ್ಕೆ ಎಲೆಕ್ಟ್ರಿಕಲ್ ಟ್ರೈನ್ ವ್ಯವಸ್ಥೆ ಮಾಡಲಾಗಿದೆ ಎಂದು ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ಹೇಳಿದರು.
ಈಗಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ‘ಕಲಿ-ನಲಿ ‘ ಎಂಬಂತೆ ಪಾಠದ ಜೊತೆಗೆ ಸಾಮಾನ್ಯ ಜ್ಞಾನ, ಪರಿಸರ ಜ್ಞಾನ ಭೌತಿಕ ಜ್ಞಾನ ಕೊಡುವುದರಲ್ಲಿ ಹೆಗ್ಗನಹಳ್ಳಿ ನಿಸರ್ಗ ಶಿಕ್ಷಣ ಸಂಸ್ಥೆಯು ವಿವಿಧ ವಿವಿಧ ರೂಪದ ಆಟಿಕೆ ಉಪಕರಣಗಳು ವಿದ್ಯುತ್ ರೈಲು ಗಾಡಿ ಹೀಗೆ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಮತ್ತು ಅನುಭವ ಮತ್ತು ನುರಿತ ಶಿಕ್ಷಕರಿಂದ ಮಕ್ಕಳಿಗೆ ಪಾಠ ಪ್ರವಚನಗಳನ್ನು ನೀಡಲಾಗುವುದು ಈ ನಿಸರ್ಗ ಶಾಲೆಯು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ನಿಸರ್ಗ ಶಾಲೆಯು ಎಲ್ ಕೆಜಿ,ಯುಕಜಿ ಡಿಗ್ರಿವರೆಗೆ ಮತ್ತು ಸಂಜೆ ಕಾಲೇಜು ನಡೆಯುತ್ತಿದ್ದೆ ಎಂದು ಮಾತನಾಡಿದ ಎಚ್ಎನ್ ಗಂಗಾಧರ್ ಸಾರ್ವಜನಿಕರಿಗೆ ಸಂಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ. ನಿಸರ್ಗ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಶಾಲಾ ಮುಖ್ಯ ಗುರುಗಳು ಶಿಕ್ಷಕ ಶಿಕ್ಷಕಿಯರ ವೃಂದ ಶಾಲಾ ಸಿಬ್ಬಂದಿ ವೃಂದದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್