ಸಿಂಧನೂರು: ಮೇ 5 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾ. ಎನ್. ಮೂರ್ತಿ ಸ್ಥಾಪಿತ ಗ್ರಾಮ ಘಟಕ ಎಲೆಕೂಡ್ಲಿಗಿ ತಹಸಿಲ್ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿ ತಾಸಿಲ್ದಾರ್ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ತಾಲೂಕ ಘಟಕ ಅಧ್ಯಕ್ಷ ನಿರುಪಾದೆಪ್ಪ ಎಲೆಕೂಡ್ಲಿಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ ಮಾತನಾಡಿ ಪ್ರತಿನಿತ್ಯ ಸಮಾಜದಲ್ಲಿ ಒಂದಲ್ಲ ಒಂದು ಕಡೆ ಕೊಲೆ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ ಅಪರಾಧಿಗಳಿಗೆ ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಅಡ್ಡಾಡ್ತಿದ್ದಾರೆ ಹಣ ಬಲ ತೋಳು ಬಲ ದಿಂದ ರಾಜಾ ರೋಷವಾಗಿ ಜೀವನ ನಡೆಸುತ್ತಿದ್ದಾರೆ ಅವರಿಂದ ಹಲ್ಲಿಗಿಡದ ಜನ ಅವಮಾನದಿಂದ ಭಯ ಭೀತಿಯಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಹ ಪರಿಸ್ಥಿತಿ ಬಂದೊದಗಿದೆ.

ಏಪ್ರಿಲ್ 10 ರಂದು ಎಲೆಕೂಡ್ಲಿಗಿ ಗ್ರಾಮದಲ್ಲಿ ಬಾಬುಸಾಬ್ ಈತನು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅದೇ ಗ್ರಾಮದ ಬಸವರಾಜ ಈಶಪ್ಪ ಗೌಡ ಇವರು ಕೊಲೆ ಮಾಡುವ ಉದ್ದೇಶದಿಂದ ಬಾಬುಸಾಬ್ ಇವರ ಮೇಲೆ ಮಾರಣಾಂತಿಕ ಅಲ್ಲಿ ಮಾಡಿದ್ದಾನೆ ಏಪ್ರಿಲ್ 10. 2025 ರಂದು ಬಾಬು ಸಾಬ್ ತುರವಿಹಾಳ ಪೊಲೀಸ್ ಠಾಣೆ ಪಿಎಸ್ಐ ಅವರಿಗೆ ದೂರು ನೀಡಿದ್ದಾನೆ ಆದರೆ ದೂರು ತೆಗೆದುಕೊಳ್ಳದೆ ಪಿಎಸ್ಐ ವಿಳಂಬ ಧೋರಣೆ ಅನುಸರಿಸಿ ಮೂರು ದಿನದ ಬಳಿಕ ಅಲ್ಲೇ ಮಾಡಿದ ಬಸವರಾಜನ ಮೇಲೆ ಪ್ರಕರಣ ದಾಖಲಾಯಿಸಿ ಪಿಎಸ್ಐ ಆರೋಪಿ ಪರ ವಕಲತ್ತು ವಹಿಸಿ ರಾಜಿ ಮಾಡಿಕೊಂಡು ಹೋಗುವಂತೆ ಬಾಬುಸಾಬ್ ಇವರ ಕುಟುಂಬದ ಮೇಲೆ ಒತ್ತಡ ಹಾಕಿರುತ್ತಾರೆ ಇಲ್ಲಿವರೆಗೂ ಹಲ್ಲೆ ಮಾಡಿದ ಬಸವರಾಜ ನನ್ನು ಕರೆದು ವಿಚಾರಿಸದೆ ಆರೋಪಿಯನ್ನು ಬಂಧಿಸಿದೆ ನಿರ್ಲಕ್ಷ್ಯ ವಹಿಸಿದ್ದು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕ ಬಾಬು ಸಾಬ್ ಅವರ ನೆರವಿಗೆ ಬಂದು ಕೂಡಲೇ ಆರೋಪಿಯನ್ನು ಬಂಧಿಸಬೇಕು ನಿರ್ಲಕ್ಷ್ಯ ವಹಿಸಿದ ಪಿಎಸ್ಐ ಅವರನ್ನು ಅಮಾನತ್ತು ಗೊಳಿಸಬೇಕೆಂದು ಈ ಧರಣಿ ಉಪವಾಸ ಸತ್ಯಾಗ್ರಹದ ಮೂಲಕ ಮಾನ್ಯ ತಸಿಲ್ದಾರ್ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾಧ್ಯಕ್ಷ ಅಶೋಕ್ ನಂಜಲದಿನ್ನಿ. ತಾಲೂಕ ಘಟಕದ ಅಧ್ಯಕ್ಷ ನಿರುಪಾದಪ್ಪ ಎಲೆಕೂಡಲಗಿ. ಮರಿಸ್ವಾಮಿ ಹಸುಂಕಲ್. ರಮೇಶ್. ಅಲ್ಲಾ ಸಾಬ್. ರವಿ. ಹುಲಿಗೆಮ್ಮ ಶೇಖಮ್ಮ ಪಂಪಮ್ಮ ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




