ಮುದಗಲ್ಲ: ಪಟಣಕ್ಕೆ ಬಸವರಾಜ ಬಂಕದಮನೆ ಅವರ ಜಮೀನಿನಲ್ಲಿ ಎಳ್ಳಮಾವಾಸ್ಯೆ ಹಬ್ಬವನ್ನು ಆಚರಣೆ ಮಾಡಲಾಯಿತು.
ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಎಳ್ಳಮಾವಾಸ್ಯೆ ಸಂಭ್ರಮವು ಮುದಗಲ್ಲಯಾದ್ಯಂತ ಕಳೆಗಟ್ಟಿದ್ದು, ಬಸವರಾಜ ಬಂಕದಮನಿ ಅವರ ಹೊಲದಲ್ಲಿ, ಕುಟುಂಬಸ್ಥರು ಭೂಮಿತಾಯಿಗೆ ಚರಗ ಚೆಲ್ಲಿ, ಸಹಪಂತಿ ಭೋಜನವನ್ನು ಸೇವಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು
ಈ ವೇಳೆ ಮಾತನಾಡಿದ ಬಸವರಾಜ ಬಂಕದಮನಿ ಅವರು, ರೈತರ ಪ್ರಮುಖ ಹಬ್ಬವಾದ ಎಳ್ಳಮಾವಾಸೆಯು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ರೈತರಿಗೆ ಇದೊಂದು ದೊಡ್ಡ ಹಬ್ಬವಾಗಿದ್ದು, ರೈತರು ಕುಟುಂಬದೊಂದಿಗೆ ಜಮೀನುಗಳಿಗೆ ತೆರಳಿ ಭೂತಾಯಿಗೆ ಚರಗ ಚೆಲ್ಲಿ ಸಹಪಂಥಿ ಭೋಜನವನ್ನು ಮಾಡುವ ಮೂಲಕ ಸಂಭ್ರಮಿಸುವುದು ಈ ಹಬ್ಬದ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.
ವರದಿ:- ಮಂಜುನಾಥ ಕುಂಬಾರ