ತೆಲಸಂಗ: ಅಥಣಿ ತಾಲೂಕಿನ ತೆಲಸಂಗ ಗ್ರಾಮದೇವತೆ ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿವರ್ಷದಂತೆ ಈ ವರ್ಷವೂ ಗೌರಿ ಹುಣ್ಣುಮೆ ದಿನದಂದ್ದು ಸಪ್ರದಾಯಕ ವಿಧಿ ವಿಧಾನಗಳಂತೆ ದೇವಿ ಪೂಜೆ ಮತ್ತು ಪಲ್ಲಕ್ಕಿ ಉತ್ಸವ ವಿವಿಧ ಕಲಾ ತಂಡದೊಂದಿಗೆ ಭವ್ಯ ಮರೆವಣಿಗೆ ಮೂಲಕ ದೇವಸ್ಥಾನಕ್ಕೆ ದೇವಿ ಆಗಮನವಾಯಿತು.
ತೆಲಸಂಗ ಸುತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಹಾಗೂ ಮಹಾರಾಷ್ಟ್ರ ಗಡಿ ಗ್ರಾಮಗಳಿಂದ ಆಗಮಿಸಿದ ಭಕ್ತರು ಹಳ್ಳದಲ್ಲಿ ಹುಟಗಿ ಸ್ನಾನ ಮಾಡಿ ದೇವಿಯ ಉಡಿ ತುಂಬಿ ದರ್ಶನ ಪಡೆದರು. ಜಾತ್ರೆಯಲ್ಲಿ ಮ್ಯೂಜುಕಲ್ ಬ್ಯಾಂಡ್ ಹಾಗೂ ಕರಡಿ ಮಜಲು ಕಾರ್ಯಕ್ರಮ ಜನಮನ ಸೆಳೆಯಿತು.
ಯುವಕರು ಹಾಗೂ ಜೋಗಪ್ಪಗಳು ಕುಣಿದು ಕುಪ್ಪಳಿಸಿದರು ಜಾತ್ರೆಯಲ್ಲಿ ಜನರು ಬ್ರೇಕ್ ಡ್ಯಾನ್ಸ್ ತೊಟ್ಟಿಲು, ಚಿಕ್ಕ ಮಕ್ಕಳ ಜಂಪಿಂಗ್ ನಲ್ಲಿ ಕುಳಿತು ಸಂಭ್ರಮಿಸಿದರು. ಸಂಜೆ ಸಂಜು ಬಸಯ್ಯಾ ಹಾಗೂ ಗಿಡ್ಡಿ ಗಿಣಿ ಖ್ಯಾತಿಯ ತೃಪ್ತಿ ಕಲಾ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.
ಜಾತ್ರೆ ಕಮಿಟಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಭಕ್ತರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದರು ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ ಸಾಗನೂರ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬಂಧೂಬಸ್ತ ಕೈಗೊಂಡಿದ್ದರು.




