ಪ್ರತಿ ವರ್ಷ ಅಕ್ಟೋಬರ್ 29 ರಂದು ಜಗತ್ತಿನಾದ್ಯಂತ, ವಿಶ್ವ ಪಾರ್ಶ್ವ ವಾಯು ದಿನ ಎಂದು ವೀಕ್ಷಿಸುತ್ತೇವೆ.ನಾವೆಲ್ಲರೂ ಪಾರ್ಶ್ವವಾಯುವಿನ ತುರ್ತು ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳೋಣ
ದಾವಣಗೆರೆ: ಪಾರ್ಶ್ವ ವಾಯು ಒಂದು ಮಾರಣಾಂತಿಕ ಕಾಯಿಲೆ ಆಗಿರುತ್ತದೆ. ಮೆದುಳಿನಲ್ಲಿ ಏಕಾಏಕಿ ರಕ್ತಹೀನತೆ (ISCHEMIC) ಅಥವಾ ರಕ್ತಸ್ರಾವ (HEMORRHAGE) ಉಂಟಾದಾಗ ಆಗುವ ವೈದ್ಯಕೀಯ ಸಮಸ್ಯೆಗೆ ನಾವು ಪಾರ್ಶ್ವ ವಾಯು ಎಂದು ಕರೆಯುತ್ತೇವೆ. ಆಂಗ್ಲ ಭಾಷೆಯಲ್ಲಿ ಪಾರ್ಶ್ವ ವಾಯುವಿಗೆ ‘ಸ್ಟ್ರೋಕ್ ‘ ಎಂಬ ಹೆಸರಿದೆ.
ಪಾರ್ಶ್ವವಾಯು ಯಾರಲ್ಲಿ ಕಂಡು ಬರುತ್ತೆ? ಈ ಕಾಯಿಲೆಗೆ ವಯೋಮಿತಿ ಹಾಗೂ ಲಿಂಗ ಭೇದ ಇರುವುದಿಲ್ಲ. ಎಳೆ ಮಗುವಿನಿಂದ ಹಿಡಿದು ಹಿರಿಯ ವಯಸ್ಕರಲ್ಲಿ ಕಂಡು ಬರಬಹುದು.ಸಾಮಾನ್ಯವಾಗಿ ಮಧ್ಯ ವಯಸ್ಕರಲ್ಲಿ ರಕ್ತದಲ್ಲಿ ಕೊಬ್ಬಿನಂಶ (CHOLESTEROL) ಹೆಚ್ಚಾದಾಗ ಹಾಗೂ ರಕ್ತದ ಒತ್ತಡದಲ್ಲಿ (BLOOD PRESSURE) ಏರುಪೇರಾದಾಗ ಈ ಸಮಸ್ಯೆಯು ಕಂಡು ಬರಬಹುದು.
ಪಾರ್ಶ್ವವಾಯು ಹೇಗೆ ಗುರುತಿಸುವುದು? ಪಾರ್ಶ್ವವಾಯು ಚಿನ್ಹೆ ಗಳನ್ನು ಗುರುತಿಸುವುದು ಬಹಳ ಮುಖ್ಯ. ಆಂಗ್ಲ ಭಾಷೆಯಲ್ಲಿ ‘BEFAST’ ಎಂಬ ನೆನಪಿನ ಸೂತ್ರ ಇರುತ್ತದೆ. ಈ ಸೂತ್ರದಲ್ಲಿ ಪ್ರತಿಯೊಂದು ಅಕ್ಷರವು ಪಾರ್ಶ್ವವಾಯುನ ಗುಣಲಕ್ಷಣಗಳನ್ನು ತಿಳಿಸುತ್ತವೆ. ಒಬ್ಬ ಸಹಜವಾಗಿರುವ ವ್ಯಕ್ತಿಯಲ್ಲಿ ತಕ್ಷಣ ಕಂಡುಬರುವಂತಹ ಸೂಚನೆಗಳಾಗಿರುತ್ತವೆ.
B: BALANCE- ಸಮತೋಲನ ಕಳೆದುಕೊಳ್ಳುವುದು. ಅಂದರೆ ಓಡಾಡುವಾಗ ಅಥವಾ ನಿಂತಾಗ ಒಂದು ಕಡೆಗೆ ವಾಲುವುದು/ಜೋಲಿ ಹೋಗುವುದು. (LOSS OF BALANCE).
E: EYES- ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು. ದೃಷ್ಟಿಯು ಒಂದು ಕಣ್ಣಿನಲ್ಲಿ ವ್ಯಥೆ ಆಗುವುದು / ಒಂದು ಬದಿಯಲ್ಲಿ ಕಾಣದಿರುವುದು (LOSS OF EYESIGHT IN ONE EYE / ONE HALF OF EITHER SIDE).
F: FACE- ಮುಖದಲ್ಲಿ ಅಸಮತೆ/ ನಗುವಾಗ ಚಹರೆ ಸೊಟ್ಟನಿಸುವುದು (FACIAL ASYMETRY).
A: ARM- ಕೈ ಅಥವಾ ಕಾಲಿನಲ್ಲಿ ಬಲ ಕಳೆದುಕೊಳ್ಳುವುದು/ ಸ್ಪರ್ಶ ಕಳೆದುಕೊಳ್ಳುವುದು/ ಸ್ಪರ್ಶದಲ್ಲಿ ವ್ಯಥೆಯಾಗುವುದು (LOSS OF STRENGTH/ VARIATION IN PERCEPTION OF TOUCH).
S: SPEECH- ಮಾತಿನಲ್ಲಿ ತೊದಲುವಿಕೆ / ಮಾತುಗಳು ಅರ್ಥವಾಗದಿರುವುದು/ ಮಾತು ಬಾರದಿರುವುದು (SPEECH SLURRING/ NOT UNDERSTANDING SPEECH/ REDUCED SPEECH).
T: TIME- ಕೊನೆಗೆ ಪಾರ್ಶ್ವ ವಾಯುವಿನ ಸೂಚನೆಗಳನ್ನು ಗುರುತಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಕ್ಕೆ ‘ಸಮಯಪ್ರಜ್ಞ’ ಇರುವುದು. (EVERY MINUTE COUNTS IN STROKE)
ಪಾರ್ಶ್ವವಾಯು ಆದಾಗ ನಾನು ಏನು ಮಾಡಬೇಕು?
ಮೇಲ್ಕಂಡ ಸೂಚನೆಗಳು ನಿಮ್ಮಲ್ಲಿ/ ನಿಮ್ಮ ಕುಟುಂಬದವರಲ್ಲಿ/ ನಿಮ್ಮ ಸ್ನೇಹಿತರಲ್ಲಿ ಕಂಡುಬಂದಲ್ಲಿ, ತಕ್ಷಣ ಪಾರ್ಶ್ವವಾಯು ಕೇಂದ್ರ ಆಸ್ಪತ್ರೆಗೆ (STROKE READY HOSPITAL) ಕರೆದೊಯ್ಯಬೇಕು. ರಕ್ತಹೀನತೆ ಉಂಟಾಗಿ ಆಗುವ ಪಾರ್ಶ್ವ ವಾಯುವಿಗೆ, ಮೂರು ಗಂಟೆ ಒಳಗೆ ಬಂದಲ್ಲಿ ನಾವು ರೋಗಿಯನ್ನು ಪರಿಶೀಲಿಸಿ ಥ್ರಾಂಬೋ ಲೈಸೆಸ್ (THROMBOLYSIS) ಮಾಡುತ್ತೇವೆ.
ಪಾರ್ಶ್ವವಾಯು ವಿನಲ್ಲಿ ಮೂರು ಗಂಟೆಯ ಚಮತ್ಕಾರವೇನು?
ಮಿದುಳಿನಲ್ಲಿ ರಕ್ತ ಹೀನತೆ (ISCHEMIA) ಉಂಟಾದಾಗ, ಗಾಳಿ ಹಾಗೂ ಆಮ್ಲಜನಕದ (OXYGEN AND BLOOD SUPPLY DEFICIENCY) ತೀವ್ರ ಕೊರತೆಯಾಗಿ, ಮೆದುಳು ಕೊಳೆಯಲು (APOPTOSIS) ಶುರುಮಾಡುತ್ತದೆ. ತರುವದ ಗಾಯದಿಂದ ಉಂಟಾಗುವ ರಸಾಯನಗಳ ಪ್ರತಿಕ್ರಿಯೆಯಿಂದ (FREE RADICLE INJURY) ಮೆದುಳಿನಲ್ಲಿ ಬಾವು ಹೆಚ್ಚಿಸುತ್ತದೆ. ಹೊತ್ತು ಕಳೆದ ಹಾಗೆ ಸಮಸ್ಯೆ ಹೆಚ್ಚಾದರೆ ಆಗಿರುವಂತಹ ಹಾನಿ ಶಾಶ್ವತವಾಗುತ್ತದೆ.
ಪಾರ್ಶ್ವವಾಯು ವ್ಯಕ್ತಿಗೆ ಕೊಬ್ಬರಿ ಎಣ್ಣೆ ಕುಡಿಸಬಹುದಾ?
ಖಂಡಿತ ಇಲ್ಲ. ಪಾಶ್ವ ವಾಯು ಆದವರಿಗೆ ಕೊಬ್ಬರಿ ಎಣ್ಣೆ ಕುಡಿಸುವ ಪದ್ಧತಿ ಕಂಡಿದ್ದೇನೆ. ಬಹುಶಃ ಎರಡು ದಶಕಗಳ ಹಿಂದೆ, ನಮಗೆ ಪಾರ್ಶ್ವವಾಯು ವಿನ ಬಗ್ಗೆ ಹೆಚ್ಚಿನ ಮಾಹಿತಿ ಇರದೆ ಇರುವುದರಿಂದ ಈ ಮೂಢನಂಬಿಕೆ ಪದ್ಧತಿಯು ಕಂಡುಬಂದಾಗಿದೆ. ಕೆಲವು ಪ್ರದೇಶಗಳಲ್ಲಿ ಪಕ್ಷಿಯ ರಕ್ತವನ್ನು ಕುಡಿಸುವ ಪದ್ಧತಿ ಇದೆ ಇವುಗಳೆಲ್ಲ ತಪ್ಪು.
ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಾರ್ಶ್ವವಾಯು ಕೇಂದ್ರ (SS NARAYANA HEALTH IS A STROKE READY HOSPITAL) ಆಗಿರುತ್ತದೆ. ನಮ್ಮಲ್ಲಿ ತುರ್ತು ಚಿಕಿತ್ಸೆ ವಿಭಾಗ, ಕ್ಷಕಿರಣ ವಿಭಾಗ, ಹಾಗೂ ನುರಿತ ನರ ರೋಗ (NEUROLOGY) ವಿಭಾಗ ಇರುತ್ತದೆ. ಅತ್ಯಾಧುನಿಕ (STATE OF THE ART) ತುರ್ತು ಘಟಕ ವ್ಯವಸ್ತೆ ಇರುತ್ತದೆ. ನೂರಾರು ಪಾರ್ಶ್ವ ವಾಯು ರೋಗಿಗಳಿಗೆ ಚಿಕಿತ್ಸೆ ಮಾಡಿರುವ ಹಾಗೂ ಸಫಲತೆ ಪಡೆದಿರುವ ಹೆಗ್ಗಳಿಕೆ ನಮ್ಮದಾಗಿದೆ. 365 ದಿನ, 24 ಗಂಟೆ ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪಾರ್ಶ್ವವಾಯು ಕಾಯಿಲೆಗೆ ಚಿಕಿತ್ಸೆ ಸೇವೆ ಲಭ್ಯವಿರುತ್ತದೆ.
ಲೇಖಕರು: ಡಾ ವೀರಣ್ಣ ಗಡಾದ, ಹಿರಿಯ ನರರೋಗ ತಜ್ಞರು, ಹಾಗೂ ವಿಭಾಗದ ಮುಖ್ಯಸ್ಥರು, ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಾವಣಗೆರೆ




