Ad imageAd image

ಬಿಹಾರದಲ್ಲಿ ನಿತೀಶ್ ಕುಮಾರ್ ರಾಜಕೀಯ ಯುಗಾಂತ್ಯ ಸನ್ನಿಹಿತ?

Bharath Vaibhav
ಬಿಹಾರದಲ್ಲಿ ನಿತೀಶ್ ಕುಮಾರ್ ರಾಜಕೀಯ ಯುಗಾಂತ್ಯ ಸನ್ನಿಹಿತ?
WhatsApp Group Join Now
Telegram Group Join Now

ಬಿಹಾರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ನವದೆಹಲಿ: ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬಿಹಾರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದರು.
೭೫ ವರ್ಷ ವಯಸ್ಸಿನ ನಿತೀಶ್ ಕುಮಾರ್ ರಾಜ್ಯ ಸಭೆಗೆ ಆಯ್ಕೆಯಾದ ಬೆನ್ನಲ್ಲೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲಿನ ಚರ್ಚೆಗೆ ಕಾರಣವಾಗಿದೆ.
ನಿತೀಶ್ ಕುಮಾರ್ ರಾಜೀನಾಮೆಯಿಂದ ಬಿಹಾರದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾಗುತ್ತಾ ಎಂಬ ಪ್ರಶ್ನೆಗಳು ಕೂಡ ಈಗ ಹುಟ್ಟಿಕೊಂಡಿವೆ. ನಿತೀಶ್ ಕುಮಾರ್ ರಾಜ್ಯ ಕಾರಣ ಕೊನೆಗೊಂಡ ಬಳಿಕ ಜೆಡಿಯು ರಾಜ್ಯದಲ್ಲಿ ತನ್ನ ಅಧಿಪತ್ಯವನ್ನು ಯಾವ ರೀತಿ ಮುಂದುವರೆಸಿಕೊAಡು ಹೋಗುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ನಿತೀಶ್ ಕುಮಾರ್ ಮುಂದಿನ ಆರು ತಿಂಗಳವರೆಗೆ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ತುರ್ತಾಗಿ ಯಾವ ನಿರ್ಧಾರಗಳು ಬರುವ ಲಕ್ಷಣ ತೋರುತ್ತಿಲ್ಲ. ಆದರೂ ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಹುದ್ದೆಗೆ ಜೆಡಿಯು ತನ್ನ ಹಕ್ಕನ್ನು ಪ್ರತಿಪಾದಿಸುತ್ತದೆಯೋ ಅಥವಾ ಬಹು ವರ್ಷಗಳಿಂದ ಆಡಳಿತ ಪಕ್ಷದ ಭಾಗವಾಗಿದ್ದರೂ ಮುಖ್ಯಮಂತ್ರಿ ಹುದ್ದೆ ಸಿಕ್ಕಿಲ್ಲ ಎಂಬ ಕೊರಗಿನಲ್ಲಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಗೆ ತನ್ನ ಹಕ್ಕನ್ನು ಮಂಡಿಸುವುದೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಒಂದAತೂ ಸತ್ಯ ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ರಾಷ್ಟç ರಾಜಕಾರಣಕ್ಕೆ ಹೋಗಿ ಸಾವಕಾಶವಾಗಿ ರಾಜಕೀಯ ನಿವೃತ್ತಿಯತ್ತ ಸಾಗುವ ದಿನಗಳು ಕಾಣಸಿಗುತ್ತಿರುವುದು ಸ್ಪಷ್ಟ. ಇನ್ನೊಂದೆಡೆ ಬಿಹಾರದಲ್ಲಿ ತನ್ನ ಮುಖಂಡ ಸಿಎಂ ಆಗಬೇಕೆಂಬ ಬಿಜೆಪಿ ಆಸೆಯೂ ಮುಂದಿನ ದಿನಗಳಲ್ಲಿ ಮುನ್ನಲೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!