ಎಜಬಾಸ್ಟನ್ ( ಬರ್ಮಿಂಗ್ ಹ್ಯಾಂ): ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಣದ ಮೊದಲ ಏಕದಿನ ಪಂದ್ಯ ಇಂದು ನಡೆಯಲಿದೆ. ಸಹಜವಾಗಿಯೇ ಬಲಿಷ್ಠ ತಂಡವಾಗಿರುವ ಇಂಗ್ಲಂಡ್ ತವರಿನಲ್ಲಿ ಕೂಡ ಆಡುತ್ತಲಿದ್ದು, ಸಂಪೂರ್ಣ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಟೆಸ್ಟ್ ಸರಣಿಯಲ್ಲಿಯೂ ಇಂಗ್ಲೆಂಡ್ ನಿರೀಕ್ಷೆಯಂತೆ ಮೇಲುಗೈ ಸಾಧಿಸಿತ್ತು.
ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಹೊಸ ತಂಡವಾಗಿದ್ದು, ಆಟಗಾರರಿಗೆ ಅನುಭವದ ಕೊರತೆ ಕಾಡುತ್ತಿದೆ. ಆದರೆ ಇಂಗ್ಲೆಂಡ್ ತಂಡ ಮೊದಲೇ ಬಲಿಷ್ಠ ತಂಡವಾಗಿದ್ದು, ಇದರ ಜೊತೆಗೆ ಇದೀಗ ಐಪಿಎಲ್ ಮುಗಿಸಿ ತವರಿಗೆ ಮರಳಿರುವ ಜೋಶ್ ಬಟ್ಲರ್ ಕೂಡ ತಂಡ ಸೇರಿಕೊಂಡಿದ್ದು, ಇಂಗ್ಲೆಂಡ್ ಗೆ ಮತ್ತಷ್ಟು ಆನೆ ಬಲ ಬಂದಂತಾಗಿದೆ.




