ಚೆಸ್ಟರ್ ಲೀ ಸ್ಟ್ರೀಟ್ ( ಇಂಗ್ಲೆಂಡ್): ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇಂದು ನಡೆಯಲಿದೆ.
ಇಲ್ಲಿನ ರಿವರ್ಸ್ ಸೈಡ್ ಮೈದಾನದಲ್ಲಿ ಇಂದು ಸಾಯಂಕಾಲ ಪಂದ್ಯ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ ತಂಡ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಟ್ವೆಂಟಿ- 20 ಸರಣಿಯನ್ನು ಕೂಡ ಗೆಲ್ಲುವ ಆತ್ಮವಿಶ್ವಾದಲ್ಲಿದೆ.




