ಸೌಥಹ್ಯಾಮ್ಟನ್: ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 37 ರನ್ ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಇಲ್ಲಿನ ರೋಸ್ ಬೌಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 3 ವಿಕೆಟ್ ಗೆ 248 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡೀಸ್ 8 ವಿಕೆಟ್ ಗೆ 211 ರನ್ ಮಾತ್ರ ಗಳಿಸಿ 37 ರನ್ ಗಳಿಂದ ಸೋಲನುಭವಿಸಿತು.
ಸ್ಕೋರ ವಿವರ
ಇಂಗ್ಲೆಂಡ್ 3 ವಿಕೆಟ್ ಗೆ 248
ಜೆಮ್ಮಿ ಸ್ಮಿತ್ 60 (26 ಎಸೆತ, 4 ಬೌಂಡರಿ, 5 ಸಿಕ್ಸರ್)
ಡಕೆಟ್ 84 (46 ಎಸೆತ, 10 ಬೌಂಡರಿ, 2 ಸಿಕ್ಸರ್) ಜೋಶ್ ಬಟ್ಲರ್ 22 ( 10 ಎಸೆತ, 1 ಬೌಂಡರಿ, 2 ಸಿಕ್ಸರ್ )
ಹ್ಯಾರಿ ಬ್ರೋಕ್ 35 (22 ಎಸೆತ, 2 ಬೌಂಡರಿ, 2 ಸಿಕ್ಸರ್) ಜಾಕೋಬ್ ಬೆಥೆಲ್ 36 ( 16 ಎಸೆತ, 1 ಬೌಂಡರಿ, 4 ಸಿಕ್ಸರ್ )
ವೆಸ್ಟ್ ಇಂಡೀಸ್ 8 ವಿಕೆಟ್ ಗೆ 211
ರೋವ್ ಮ್ಯಾನ್ ಪೊವೆಲ್ 79 ( 45 ಎಸೆತ, 9 ಬೌಂಡರಿ, 4 ಸಿಕ್ಸರ್)
ಸಾಯಿ ಹೋಪ್ 45 ( 27 ಎಸೆತ, 3 ಬೌಂಡರಿ, 3 ಸಿಕ್ಸರ್)
ಪಂದ್ಯ ಶ್ರೇಷ್ಠ: ಬೆನ್ ಡಕೆಟ್, ಸರಣಿ ಶ್ರೇಷ್ಠ: ಜೋಶ್ ಬಟ್ಲರ್




