ನೀವು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಆರೋಗ್ಯಕರ ಉಪಹಾರ ಸೇವಿಸಲು ಬಯಸಿದರೆ ರಾಗಿ ಹಿಟ್ಟಿನಿಂದ ಸೆಟ್ ದೋಸೆಗಳನ್ನು ತಯಾರಿಸಬಹುದು. ಈ ರಾಗಿ ದೋಸೆಗಳನ್ನು ಅಡುಗೆ ಸೋಡಾ ಹಾಗೂ ರವೆ ಇಲ್ಲದೆ ತುಂಬಾ ಸುಲಭವಾಗಿ ಸಿದ್ಧಪಡಿಸಬಹುದು. ನಾವು ತಿಳಿಸಿದಂತೆ ರಾಗಿ ಹಿಟ್ಟಿನಿಂದ ದೋಸೆಗಳನ್ನು ಮಾಡಿದರೆ ಸೂಪರ್ ಟೇಸ್ಟಿಯಾಗಿರುತ್ತವೆ. ಅದನ್ನು ಶೇಂಗಾ ಮತ್ತು ಟೊಮೆಟೊ ಚಟ್ನಿಯೊಂದಿಗೆ ಸೇವಿಸಿದರೆ ಸಖತ್ ರುಚಿಕರವಾಗಿರುತ್ತೆ
ಅಕ್ಕಿ – ಅರ್ಧ ಕಪ್, ಮೊಸರು – 4 ಟೀಸ್ಪೂನ್, ರಾಗಿ ಹಿಟ್ಟು – 1 ಕಪ್, ಸಣ್ಣಗೆ ಕತ್ತರಿಸಿದ ಈರುಳ್ಳಿ – ಕಪ್, ಸಣ್ಣಗೆ ಕತ್ತರಿಸಿದ ಟೊಮೆಟೊ – ಕಪ್ ಹಸಿ ಮೆಣಸಿನಕಾಯಿ – 2, ಶುಂಠಿ ಪೀಸ್ಗಳು – ಟೀಸ್ಪೂನ್, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವು – ಸ್ವಲ್ಪ, ಟೀಸ್ಪೂನ್ – ಜೀರಿಗೆ
ರಾಗಿ ಸೆಟ್ ದೋಸೆ ತಯಾರಿಸುವ ವಿಧಾನ: ಮೊದಲಿಗೆ ಅರ್ಧ ಕಪ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಗಂಟೆವರೆಗೆ ನೆನೆಸಿ ಇಡಿ.ಬಳಿಕ ಅಕ್ಕಿಯನ್ನು ಮತ್ತೊಮ್ಮೆ ತೊಳೆದು ನೀರನ್ನು ಬಸಿದು, ಮಿಶ್ರಣ ಮಾಡುವ ಬಟ್ಟಲಿನಲ್ಲಿ ಇರಿಸಿ. ಇದಕ್ಕೆ 4 ಟೀಸ್ಪೂನ್ ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.ಅದಕ್ಕೆ ಒಂದು ಕಪ್ ರಾಗಿ ಪುಡಿ ಹಾಗೂ ಒಂದು ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ.
ಈ ರೀತಿ ರಾಗಿ ಹಿಟ್ಟನ್ನು ಮಿಶ್ರಣ ಮಾಡುವ ಬಟ್ಟಲಿಗೆ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಟೀಸ್ಪೂನ್ ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈ ರಾಗಿ ಹಿಟ್ಟನ್ನು ದೋಸೆ ಹಿಟ್ಟಿನಂತೆ ತಯಾರಿಸಬೇಕಾಗುತ್ತದೆ. ಇದನ್ನು ಮುಚ್ಚಿ 10 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.




