Ad imageAd image

ಗುರುಗಳಿಂದ ಮಕ್ಕಳಿಗೆ ಪರಿಸರ ಜಾಗೃತಿ

Bharath Vaibhav
ಗುರುಗಳಿಂದ ಮಕ್ಕಳಿಗೆ ಪರಿಸರ ಜಾಗೃತಿ
WhatsApp Group Join Now
Telegram Group Join Now

ಕಲಘಟಗಿ:-  ಬಗಡಗೇರಿ  ಗುರುವೃಂದದ ಮಾರ್ಗದರ್ಶನದಲ್ಲಿ ವಿವಿಧ ತರಹದ ನೂರಾರು ಸಸಿಗಳನ್ನು ಶಾಲೆಯ ಆವರಣದಲ್ಲಿ ಬುಧವಾರದಂದು ನೆಡುವುದರ ಮೂಲಕ ತಾಲೂಕಿನ ಬಗಡಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡರು.

ಶಾಲೆಯ ಸಾಲುಮರದ ತಿಮ್ಮಕ್ಕ ಇಕೋಕ್ಲಬ್ ವತಿಯಿಂದ ನಿರಂತರವಾಗಿ ಪ್ರತಿ ತಿಂಗಳು ಪರಿಸರ ಸಂರಕ್ಷಣೆಗೆ ಸಂಬoಧಿಸಿದ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಅದರನ್ವಯ ಈ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ಶಿಕ್ಷಕ ಶಿಕ್ಷಕಿಯರೆಲ್ಲರೂ ಒಗ್ಗೂಡಿಕೊಂಡು ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ ಅಂಚಟಗೇರಿಯಲ್ಲಿನ ಸೇವಂತಿಕಾ ನರ್ಸರಿಯಿಂದ ಸಾವಿರಾರು ರೂಪಾಯಿಗಳಷ್ಟು ಬೆಲೆ ಬಾಳುವ ಸಸಿಗಳನ್ನು ಖರೀದಿಸಿ ತರಲಾಗಿತ್ತು.

ಅದಕ್ಕೆ ಎಸ್.ಡಿ.ಎಂ.ಸಿ. ಸದಸ್ಯ ಕಲ್ಲಪ್ಪ ಶಿರಕೋಳ ಕೂಡಾ ಕೈ ಜೋಡಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಎಲ್ಲ ಶಿಕ್ಷಕರೂ ಒಂದೊoದು ಸಸಿಗಳನ್ನು ನೆಟ್ಟರಲ್ಲದೇ ಎಲ್ಲ ಸಸಿಗಳನ್ನು ನೆಡುವ ಸಂದರ್ಭದಲ್ಲಿ ಅದರ ಮಹತ್ವದ ಕುರಿತು ಜ್ಞಾನ ನೀಡಲಾಯಿತು. ಜೊತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಳ್ಳುವುದಾದರೆ ಅಂದು ಒಂದು ಸಸಿಯನ್ನು ನೆಟ್ಟು ಅದನ್ನು ಪೋಶಿಸಿ ಬೆಳೆಸಬೇಕು ಎಂದು ಮುಖ್ಯೋಪಾಧ್ಯಾಯಿನಿ ಎಸ್.ಎನ್.ಮಿಠಾಯಿಗಾರ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಇಕೋಕ್ಲಬ್ ಸಂಯೋಜಕ, ಶಿಕ್ಷಕ ಅಶೋಕ ಶಿರಗುಪ್ಪಿ, ಶಿಕ್ಷಕರುಗಳಾದ ಶ್ರೀದೇವಿ ಬಣಗಾರ, ಎನ್.ಎಸ್.ಅಂಬಿಗೇರ, ಎಸ್.ಎಸ್.ರೂಗಿ, ಜಿ.ವ್ಹಿ.ಹಿರೇಮಠ, ನೀಲಮ್ಮ ಸವದತ್ತಿ, ಬಿ.ವ್ಹಿ.ಪಾಟೀಲ, ಈರಣ್ಣ ಕುಂದಗೋಳ, ಎಸ್.ಸಿ.ಬಣಗಾರ, ಎಸ್.ಸಿ.ಅಂಗಡಿ ಇನ್ನಿತರರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.

ವರದಿ :-ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!