ಮಲ್ಲಮ್ಮನ ಬೆಳವಡಿ : ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ).ಬೈಲಹೊಂಗಲ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಮೂಗಬಸವದಲ್ಲಿ ಇಂದು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉಡಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಭಾರತಿ ಪೂಜಾರ್, ತಾಲೂಕಿನ ಸಿ ಎಸ್ ಸಿ ನೋಡಲ್ ಅಧಿಕಾರಿ ನಾಗರಾಜ್ ಹೂಗಾರ್, ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಎಸ್.ಜಿ.ದೊಡವಾಡ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಆರ್. ಡಿ.ಹಿರೇಮಠ್ ಇವರು ಯೋಜನೆಯಿಂದ ನೀಡಿದ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಪರಿಸರ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಆಧುನಿಕರಣ, ನಾಗರಿಕರಣ ಭರದಲ್ಲಿ ನಾವು ಪರಿಸರ ನಾಶ ಮಾಡುತ್ತಿದ್ದೀವೆ. ಇದೆ ರೀತಿ ಮುಂದುವರೆದರೆ ಮುಂದಿನ ಪೀಳಿಗೆಯ ಶಾಪಕ್ಕೆ ನಾವು ಗುರಿಯಾಗಬೇಕಾಗುತ್ತದೆ.ಮಾನವ ಜನಾಂಗದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಅದರಿಂದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಪರಿಸರ ಬೆಳೆಸಿ ಹಸಿರೇ ಉಸಿರಾಗಿಸೋಣ ಅಂತ ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು.ತಾಲೂಕಿನ ಸಿ ಎಸ್ ಸಿ ನೋಡಲ್ ಅಧಿಕಾರಿ ಮಾತನಾಡಿ ಎಲ್ಲರು ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಅನ್ನುವ ಹಾಗೆ ಎಲ್ಲರು ಗಿಡ ನೆಟ್ಟು ಪರಿಸರ ರಕ್ಷಣೆ ಮಾಡೋಣ ಅಂತ ತಿಳಿಸಿದರು.
ಹಾಗೆಯೇ ಯೋಜನೆಯೂ ಎಲ್ಲಾ ಕ್ಷೇತ್ರಗಳಲ್ಲೂ ಅಭಿರುದ್ದಿ ಉಸಿರಾಗಿಸಿ ಮಾನವ ಜನಾಂಗದ ಅಭಿರುದ್ದಿ ಪೂರಕ ಕೆಲಸಗಳ ಮಾಡುತ್ತ ಬಂದಿದೆ. ಪರಿಸರದಲಿ ಸಿಗುವ ಉಚಿತ ಗಾಳಿಗೆ ಮುಂದೊಂದು ದಿನ ದುಡ್ಡು ಕೊಟ್ಟು ಕೊಂದುಕೊಳ್ಳಬಹುದಾದ ದಿನ ಬರಬಹುದು ಅದರಿಂದ ಮಾನವ ಜನಾಂಗಕ್ಕೆ ನಾವು ಏನಾದ್ರು ಕೊಡುಗೆ ನೀಡುವದಾದ್ರೆ ಪರಿಸರ ಉಳಿಸೋಣ. ಮನೆಗೆ ಒಂದು ಮಗು, ಊರಿಗೆ ಒಂದು ವನ ಅನ್ನುವ ಹಾಗೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಸಿರಾಗಿಸೋಣ, ಹಾಗೂ ತಮ್ಮ ಹುಟ್ಟುಹಬ್ಬದ ನೆನಪಿಗೆ ಒಂದು ಸಸಿ ನೆಟ್ಟು ಎಲ್ಲರಿಗೂ ಸ್ಫೂರ್ತಿ ಆಗಿರಿ ಎಂದು ವಲಯ ಮೇಲ್ವಿಚಾರಕರು ಸಂತೋಷ್ ಕೆ ಟಿ ತಿಳಿಸಿದರು.ಕೊನೆಯಲ್ಲಿ ಪರಿಸರ ಜಾಗೃತಿ ಕುರಿತ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಉಡುಗೊರೆ ನೀಡಲಾಯಿತು.
ಕಾರ್ಯಕ್ರಮದ ಅಚ್ಚುಕಟ್ಟಾಗಿ ನಿರೂಪಣೆಯನ್ನು ಶಿವಲೀಲಾ ಪೂಜಾರ್ ನಡೆಸಿಕೊಟ್ಟರು. ಕಾರ್ಯಕ್ರಮ ಜವಾಬ್ದಾರಿ ಅನ್ನು ವಿಜ್ಞಾನ ಶಿಕ್ಷಕರಾದ ಶ್ರೀ ಎಂ.ಎಸ್ ನಾಶಿಪುಡಿ ಅವರು ವಹಿಸಿದ್ದರು. ಹಾಗೂ ಶ್ರೀಮತಿ ಶಿವಲೀಲಾ ಪಾಟೀಲ್ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಯೋಜನೆಯ ಒಕ್ಕೂಟದ ಅಧಕ್ಷರು, ಸದಸ್ಯರು, ಸೇವಾಪ್ರತಿನಿಧಿ ಮಂಜುನಾಥ್ ಕೊಟಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ದುಂಡಪ್ಪ ಹೂಲಿ




