Ad imageAd image

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

Bharath Vaibhav
ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ:- ವಲಯದ ಬೂದಿಹಾಳ ಕಾರ್ಯಕ್ಷೇತ್ರದ ಕಲ್ಮೇಶ್ವರ ಗುಡಿಯಲ್ಲಿ ದೇವಸ್ಥಾನ ಕಮಿಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪಸ್ಥಿತಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷರಾಗಿರುವ ಸುರೇಶ್ ಸೂರ್ಯವಂಶಿ ಹಾಗೂ ಬಾಳಪ್ಪ ನಾಗನ್ನವರ ಮತ್ತು ಊರಿನ ಹಿರಿಯ ಗಣ್ಯರು ಹಾಗೂ ಶಾಲೆಯ ಶಿಕ್ಷಕರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು

ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾಗಿರುವ ಶಿವಾನಂದ್ ಬಳೆಗಾರ ರವರು ಪರಿಸರ ಸಂರಕ್ಷಣೆ ಹಾಗೂ ಪರಿಸರದಿಂದ ಮನುಷ್ಯರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದ ನಿರೂಪಣೆಯನ್ನು ತಾಲೂಕಿನ ಕೃಷಿ ಅಧಿಕಾರಿ , ರವಿ ಆರ್ ಗೊಂಡ ಅವರು ನೆರವೇರಿಸಿದರು ಹಾಗೂ ಸ್ವಾಗತ ಮತ್ತು ವಂದನಾರ್ಪಣೆಯನ್ನು ವಲಯದ ಮೇಲ್ವಿಚಾರಕರಾದ ಸಂತೋಷ, ಕೆ,ಟಿ ಅವರು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ಸದಸ್ಯರು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಸ್ಥಳೀಯ ಸೇವಾ ಪ್ರತಿನಿಧಿಗಳು ಹಾಗೂ ಸಿಎಸ್‌ಸಿ ಸೇವದಾರರು ಉಪಸ್ಥಿತರಿದ್ದರು

ವರದಿ ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!