Ad imageAd image

ಪೌಷ್ಠಿಕ ಆಹಾರ ಸೇವನೆಯಿಂದ ಅಪೌಷ್ಠಿಕತೆ ನಿರ್ಮೂಲನೆ: ರೋಹಿತಾಕ್ಷ

Bharath Vaibhav
ಪೌಷ್ಠಿಕ ಆಹಾರ ಸೇವನೆಯಿಂದ ಅಪೌಷ್ಠಿಕತೆ ನಿರ್ಮೂಲನೆ: ರೋಹಿತಾಕ್ಷ
WhatsApp Group Join Now
Telegram Group Join Now

ಕೆ.ಎಚ್‌.ಬಿ ಕಾಲೋನಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ “ಸಿಂಧೂರ ಕೇಂದ್ರದ ” ಸದಸ್ಯರಿಗೆ ಪೌಷ್ಟಿಕ ಆಹಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜ್ಞಾನವಿಕಾಸ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಹಾಗೂ ಪೌಷ್ಟಿಕ ಆಹಾರದ ಸೇವನೆಯಿಂದ ದೇಹಕ್ಕೆ ದೊರೆಯುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮಾಶಾಸನ ಫಲಾನುಭವಿಯವರ ಯೋಗಕ್ಷೇಮ ವಿಚಾರಿಸಿ ಮಾಶಾಸನ ಮಂಜೂರಾತಿಯ ಪತ್ರವನ್ನು ವಿತರಿಸಿದರು.

ಪೊಲೀಸ್ ಇಲಾಖೆಯ ಅಧಿಕಾರಿಯಾದ ಹೆಡ್ ಕಾನಿಷ್ಟೇಬಲ್ ನಾಗರತ್ನರವರು ಪೋಲಿಸ್ ಇಲಾಖೆಯಲ್ಲಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಮ್ಮದ್ ಖಾಶಿಂ ರವರು ಸದಸ್ಯರಿಗೆ ಪೌಷ್ಟಿಕ ಆಹಾರ ಸಿರಿಧಾನ್ಯ ಕುರಿತು ಈ ಕಾಲಮಾನದಲ್ಲಿ ಬಳಸುವ ಆಹಾರ ಪದ್ಧತಿ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಹಾಗೂ ಸಿರಿಧಾನ್ಯ ಬಳಕೆ ಮಾಡುವುದರಿಂದ ಬಿಪಿ,ಶುಗರ್,ರಕ್ತ ಹೀನತೆ, ಮಾನಸಿಕ ಒತ್ತಡ, ಗರ್ಭಿಣಿಯರ ಆರೈಕೆ,ಮಕ್ಕಳ ಆರೈಕೆ, ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಿದರು. ಆಶಾ ಮೇಲ್ವಿಚಾರಕಿ ಸುಜಾತಾ ರವರು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹಾಗೂ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅಪೌಷ್ಟಿಕತೆ ಕುರಿತು ರಾಸಾಯನಿಕ ಆಹಾರವನ್ನು ಬಳಸುವುದರಿಂದ ಅತಿ ಹೆಚ್ಚು ಕ್ಯಾನ್ಸರ್ ಕಾಣಿಸಿಕೊಳ್ಳುವುದು ಆದಕಾರಣ ಆಹಾರ ಪದ್ಧತಿಯಲ್ಲಿ ಹಸಿ ತರಕಾರಿಗಳು, ಮೊಳಕೆ ಕಟ್ಟಿದ ಕಾಳುಗಳು, ಸಿರಿಧಾನ್ಯ ಬಳಕೆ ಬೆಳೆಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾನ್ಯ ತಾಲೂಕಿನ ಯೋಜನಾಧಿಕಾರಿ ಸುಧೀರ್ ಹಂಗಳೂರ್, ಒಕ್ಕೂಟದ ಅಧ್ಯಕ್ಷರು ಹೇಮಾವತಿ, ಕೇಂದ್ರದ ಸದಸ್ಯರು, ತಾಲೂಕಿನ ಸಮನ್ವಯಾದಿಕಾರಿ ಪ್ರಿಯಾ ಸೇವಾ ಪ್ರತಿನಿಧಿಗಳಾದ ಗೀತಾ ನೇತ್ರಾವತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!