ರಷ್ಯಾ, ಉಕ್ರೇನ್ ಯುದ್ದ ಮುಗಿಯುವ ಲಕ್ಷಣ ತೋರುತ್ತಿಲ್ಲ. ಈ ನಡುವೆ ಯುದ್ದಕ್ಕೆ ಹೋದ ಗಂಡ ಆಗ, ಬರುತ್ತಾನೆ. ಈಗ ಬರುತ್ತಾನೆ. ಸುರಕ್ಷಿತವಾಗಿ ಬರುತ್ತಾನೆಯೋ ಇಲ್ಲವೋ ಎಂಬ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಉಕ್ರೇನ್ ನ ಕಟೆರಿನಾ ಹಲುಷ್ಕಾ ಎಂಬ ಮಹಿಳೆ ತನ್ನ ಮೊದಲ ಗೆಳೆಯನ್ನು ಯುದ್ಧದಲ್ಲಿ ಕಳೆದುಕೊಂಡಿದ್ದಾಳೆ. ಇದೀಗ ತನ್ನ ಸಂಗಾತಿ ಕೂಡ ರಷ್ಯಾ ವಿರುದ್ಧ ಯುದ್ಧಕ್ಕೆ ತೆರಳಿದ್ದಾನೆ. ಇದರಿಂದ ಈ ಮಹಿಳೆಯ ತನ್ನ ಸಂಗಾತಿಗಾಗಿ ಕಾಯುತ್ತಿದ್ದಾಳೆ.
ಈ ಮಹಿಳೆ ಎರಡು ಕಡೆ ಉದ್ಯೋಗ ಮಾಡುತ್ತಿದ್ದರು. ಜೊತೆಗೆ ಸ್ವಯಂ ಸೇವಕರಂತೆ ವೈದ್ಯ ಸೇವೆಯನ್ನು ಮಾಡುತ್ತಿದ್ದರು. ಆದರೆ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಮನೆಯಲ್ಲೇ ಇದ್ದಾರೆ. ನನ್ನ ಸಂಗಾತಿಯ ಕರೆ, ಸಂದೇಶಕ್ಕಾಗಿ ಕಾಯುತ್ತೇನೆ, ಪುನರ್ಮಿಲನಕ್ಕಾಗಿ ಹಾತೊರೆಯುತ್ತಿದ್ದೇನೆ. ನಾನೀಗ ಕಾಯುವ ಮಹಿಳೆ. ನಿರಂತರ ಕಾಯುವಿಕೆಯು ತುಂಬಾ ಒತ್ತಡದಿಂದ ಕೂಡಿದೆ ಅಂತಾರೆ 28 ವರ್ಷದ ಮಹಿಳೆ.
ಈ ಮಹಿಳೆ ಈಗಾಗಲೇ ಓರ್ವ ಗೆಳೆಯನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದಾಳೆ. ಆ ನೋವು ಮತ್ತೆ ಯಾವುದೇ ಗಳಿಕೆಯಲ್ಲಿ ಬರಬಹುದು ಎಂಬ ಭೀತಿಯಲ್ಲಿದ್ದಾರೆ.ಆತ ಯುದ್ಧಕ್ಕೆ ಹೋಗಿ ವಾಪಸ್ ಬರಲ್ಲ ಎಂಬ ಭಾವನೆಯಲ್ಲೇ ನಿತ್ಯ ಬದುಕಬೇಕು. ಜೊತೆಗೆ ಯುದ್ಧದಲ್ಲಿ ಮೃತಪಟ್ಟರೆ ಮತ್ತೆ ಆತನನ್ನು ನೋಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಯಲ್ಲೇ ಇರಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಆಗಾಗ ವಿಡಿಯೋ ಕಾಲ್ ಮಾಡಿ ಪತ್ನಿಗೆ ಪತಿ ಭರವಸೆ ಮೂಡಿಸುತ್ತಾರೆ. ಅದೇ ಭರವಸೆಯಲ್ಲಿ ಡೇರಿಯಾ ಯೆಡಮೋವಾ ಕೂಡ ತನ್ನ ಇಬ್ಬರು ಮಕ್ಕಳ ಜೊತೆ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದಾರೆ. ಇವರ ಪುತ್ರಿ ಜನಿಸಿದ ಬಳಿಕ ತಂದೆ ಯುದ್ಧಕ್ಕೆ ತೆರಳಿದ್ದಾರೆ. ಇದರಿಂದಾಗಿ ಇವರ 11 ತಿಂಗಳ ಮಗಳು,ತಂದೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
: ಆರ್ಥರ್ ಅವರ ಮೂರು ವರ್ಷದ ಮಗ ಕೂಡ ತಂದೆ ವಾಪಸ್ ಬರುವ ನಿರೀಕ್ಷೆಯಲ್ಲಿದ್ದಾರೆ. “ಅಪ್ಪ ಬರುತ್ತಾರೆ, ನಾವು ಒಟ್ಟಿಗೆ ಮಲಗುತ್ತೇವೆ” ಅಥವಾ “ನಾವು ಒಟ್ಟಿಗೆ ಓದುತ್ತೇವೆ” ಎಂದು ಮಗ ಆಗಾಗ ಹೇಳುತ್ತಿರುತ್ತಾನೆ ಎಂದು ಯೆಡಮೋವಾ ತಿಳಿಸಿದರು.
-ಕೃಪೆ