ಹುಬ್ಬಳ್ಳಿ: ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಪ್ರತಿ ತಿಂಗಳು ಸ್ಮಾರ್ಟ್ ಲಿವಿಂಗ್ ಕಾರ್ಯಕ್ರಮವು ಜರುಗುತ್ತದೆ. ಇದರಲ್ಲಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅನೇಕ ಮೌಲ್ಯಗಳು ಮತ್ತು ನೈತಿಕತೆಗಳನ್ನು ಕಲಿಸಿಕೊಡಲಾಗುತ್ತದೆ.

ನವೆಂಬರ್ ತಿಂಗಳ ಸ್ಮಾರ್ಟ್ ಲಿವಿಂಗ್ ಕಾರ್ಯಕ್ರಮವು ಫಿಟ್ ಇಂಡಿಯಾ ಮೂವ್ಮೆಂಟ್‌ಗೆ ಸಮರ್ಪಿತವಾಗಿದೆ. ಇದಕ್ಕಾಗಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದು ನಗರದಾದ್ಯಂತ ವಾಕಥಾನ್ ಅನ್ನು ನಡೆಸಿದರು.

ಶ್ರೀ ಚೈತನ್ಯ ಟೆಕ್ನೋ ಶಾಲೆಯ ಎರಡು ಶಾಖೆಗಳಿಂದ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಂದು ಜಾತಾ ಕೇಶ್ವಾಪುರದಲ್ಲಿ ಮತ್ತು ಎರಡನೆಯ ಜಾತಾ ವಿದ್ಯಾನಗರದಲ್ಲಿ ನಡೆಸಿದವು.
ನಮ್ಮ ಸುಂದರ ಕರ್ನಾಟಕ ರಾಜ್ಯದ ಬಗ್ಗೆ ನಮ್ಮ ಪ್ರೀತಿ ಮತ್ತು ಹೆಮ್ಮೆಯನ್ನು ಪ್ರದರ್ಶಿಸುವ 200 ಅಡಿ ಉದ್ದದ ಕರ್ನಾಟಕ ಧ್ವಜವನ್ನು ವಿದ್ಯಾರ್ಥಿಗಳು ಹೊತ್ತೊಯ್ದರು.
ವರದಿ: ಗುರುರಾಜ ಹಂಚಾಟೆ




