ವಿಶ್ವಸಂಸ್ಥೆ: ಪ್ರತಿ 10 ನಿಮಿಷಗಳಿಗೊಮ್ಮೆ ಓರ್ವ ಮಹಿಳೆಯನ್ನು ಆಕೆಯ ಕುಟುಂಬ ಸದಸ್ಯರು ಅಥವಾ ಪ್ರಿಯಕರ ಕೊಲ್ಲುತ್ತಿದ್ದಾರೆ ಎನ್ನುವ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ವಿಶ್ವಸಂಸ್ಥೆ ವರದಿಯ ಪ್ರಕಾರ 2023ರಲ್ಲಿ ಜಾಗತಿಕವಾಗಿ ಒಟ್ಟು 85,000 ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಲಡಾಯಿತು.
ಈ ಹತ್ಯೆಗಳಲ್ಲಿ ಶೇ. 60ರಷ್ಟು ಅಂದರೆ 51,100 ಮಹಿಳೆಯರನ್ನು ಪ್ರಿಯಕರ ಅಥವಾ ಕುಟುಂಬದ ಸದಸ್ಯರು ಕೊಲೆ ಮಾಡಿದ್ದಾರೆ.
ಅಂದಾಜಿನ ಪ್ರಕಾರ ಪ್ರತಿದಿನ 140 ಮಹಿಳೆಯರು ತಮ್ಮ ಸಂಗಾತಿ ಅಥವಾ ಹತ್ತಿರದ ಸಂಬಂಧಿ ಕೈಯಲ್ಲಿ ಸಾಯುತ್ತಾರೆ ಎಂದು ಡೇಟಾ ತಿಳಿಸಿದೆ, ಅಂದರೆ ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿ ಕೊಲ್ಲಲ್ಪಡುತ್ತಾರೆ.
2023ರಲ್ಲಿ, ಆಫ್ರಿಕಾದಲ್ಲಿ ಸ್ತ್ರೀ ಹತ್ಯೆ ಪ್ರಕರಣಗಳು ಅತ್ಯಧಿಕ ದರಗಳನ್ನು ದಾಖಲಿಸಿದೆ. ಅದಾದ ನಂತರ ಅಮೆರಿಕ ಹಾಗೂ ಓಷಿಯಾನಿಯಾ ಕ್ರಮವಾಗಿ ನಂತರದ ಸ್ಥಾನದಲ್ಲಿದೆ.