Ad imageAd image

ಮಾಜಿ ಶಾಸಕ ತೆಲ್ಕೂರ್ ಆರೋಪ ಸತ್ಯಕ್ಕೆ ದೂರ: ಮುಗುಟಿ ಆಗ್ರಹ.

Bharath Vaibhav
ಮಾಜಿ ಶಾಸಕ ತೆಲ್ಕೂರ್ ಆರೋಪ ಸತ್ಯಕ್ಕೆ ದೂರ: ಮುಗುಟಿ ಆಗ್ರಹ.
WhatsApp Group Join Now
Telegram Group Join Now

ಸೇಡಂ:- ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮಾಡ್ಯುಲರ್ ಅಪರೇಷನ್ ಥಿಯೇಟರ್ ಗಳಿಗೆ ಉಪಕರಣಗಳ ಖರೀದಿ ಹೆಸರಲ್ಲಿ ಅವ್ಯವಹಾರ ನಡೆದಿರುವುದಾಗಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ದಲಿತ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾರುತಿ ಮೂಗುಟಿ ಅವರು ಹೇಳಿಕೆ ನೀಡಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮಾಡ್ಯುಲರ್ ಅಪರೇಷನ್ ಥಿಯೇಟರ್ ಗಳಿಗೆ ಉಪಕರಣಗಳ ಖರೀದಿಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ಆರಂಭಗೊಂಡು ಬಹುತೇಕ ಒಂದು ದಶಕ ಸಮೀಪಿಸುತ್ತಿರುವುದು ಈ ಅವಧಿಯಲ್ಲಿ ಪ್ರತ್ಯೇಕ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ವಿಭಾಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಂಡು ಈಗಾಗಲೇ ಜನರಿಗೆ ಅತ್ಯುತ್ತಮವಾದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಜೊತೆಗೆ ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ಆರೋಗ್ಯ ಸೇವೆಗಳು ಜನರಿಗೆ ಲಭಿಸುತ್ತಿವೆ.

ಇದೇ ಕಾರಣಕ್ಕಾಗಿ ಕಲಬುರಗಿ ನಗರವು ಅತ್ಯುತ್ಕೃಷ್ಟ ಆರೋಗ್ಯ ಸೇವೆಗಳ ಗುಚ್ಚಾವಗಿ ಮಾರ್ಪಟ್ಟಿದೆ.ಡಾ.ಶರಣಪ್ರಕಾಶ್ ಪಾಟೀಲರ ಇಂತಹ ಜನಪರ ಸೇವೆಗಳಿಂದಾಗಿ ಅವರೊಬ್ಬ ಶುದ್ಧಹಸ್ತದ ರಾಜಕಾರಣಿ ಎಂಬುದು ಈಗಾಗಲೇ ರಾಜ್ಯದಂತ ಮನೆ ಮಾತಾಗಿದೆ.

ಈ ಹಿಂದಿರುವ ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಹೇಳಿಕೆ ಅತ್ಯಂತ ಬೇಸರ ಮೂಡಿಸುವಂತಿದೆ ಎಂದು ಮುಗುಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ವರ್ಚಸ್ಸಿಗೆ ಮಸಿ ಬಳಿಯಲು ಬಿಜೆಪಿ ಮುಖಂಡ ತೆಲ್ಕೂರ್ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

ಹಾವೇರಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೆಂಗಳೂರು, ಹಾಗೂ ಮೈಸೂರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 114ಮಾಡ್ಯುಲರ್ ಅಪರೇಷನ್ ಥಿಯೇಟರ್ ಗಳನ್ನು ಸ್ಥಾಪಿಸಲು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಅಲ್ಲದೆ ಈ ನಿಟ್ಟಿನಲ್ಲಿ ಕಾನೂನಾತ್ಮವಾಗಿ ಟೆಂಡರ್ ಆಹ್ವಾನಿಸಿ ಉಪಕರಣಗಳನ್ನು ಖರೀದಿಸಲಾಗಿದೆ ಹಾಗಾಗಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿಕೆ ನೀಡಿದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!