Ad imageAd image

ಹೆಗ್ಗನಹಳ್ಳಿಯಲ್ಲಿ ನರೇಂದ್ರ ಮೋದಿ 3ನೆ ಬಾರಿಗೆ ಪ್ರಮಾಣ ವಚನ ಸ್ವೀಕಾರ ನಿಮಿತ್ತ ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್ ಸಿಹಿ ಹಂಚಿದರು

Bharath Vaibhav
ಹೆಗ್ಗನಹಳ್ಳಿಯಲ್ಲಿ ನರೇಂದ್ರ ಮೋದಿ 3ನೆ ಬಾರಿಗೆ ಪ್ರಮಾಣ ವಚನ ಸ್ವೀಕಾರ ನಿಮಿತ್ತ ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್ ಸಿಹಿ ಹಂಚಿದರು
WhatsApp Group Join Now
Telegram Group Join Now

ಬೆಂಗಳೂರು: -ಪೀಣ್ಯ ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಮಾರ್ಗದರ್ಶನದಲ್ಲಿ ಹಾಗೂ ಸಲಹೆದಂತೆ ಹೆಗ್ಗನಹಳ್ಳಿ ವಾರ್ಡಿನ ಬಿಜೆಪಿ ಪ್ರಭಾವಿ ನಾಯಕ , ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ಅವರ ನೇತೃತ್ವದಲ್ಲಿ ಶ್ರೇಷ್ಠ ಪ್ರಧಾನಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಹೆಗ್ಗನಹಳ್ಳಿ ಅರಳಿಮರದ ಬಸ್ ನಿಲ್ದಾಣ ಹತ್ತಿರ ಆಯೋಜಿಸಲಾಗಿತ್ತು.

ಪ್ರದಾನಿ ನರೇಂದ್ರ ಮೋದಿ ಪದಗ್ರಹಣ ವೇಳೆ ಬೃಹತ್ ಆಕಾರದ ಕೇಕ್ ಕತ್ತರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್ ಮಾತನಾಡಿ ದೇಶಕ್ಕೆ ಮೋದಿ ಅವರ ಕೊಡಿಗೆ ಅಪಾರವಾಗಿದ್ದು ಅದಲ್ಲದೆ ನಮ್ಮ ಬೆಂಗಳೂರು ಉತ್ತರ ಲೋಕಸಭಾ ಎನ್ ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಿರಿ

ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದು ನಿಮ್ಮೇಲ್ಲರ ಶ್ರಮ ನಮ್ಮ ನಾಯಕರಾದ ಹಾಗೂ ಶಾಸಕ ಎಸ್ ಮುನಿರಾಜು ಅಣ್ಣನವರು ಹಗಲು ರಾತ್ರಿ ಕ್ಷೇತ್ರದಲ್ಲಿ ಸುತ್ತಾಡಿ ಸಭೆಗಳ ಮೇಲೆ ಸಭೆಗಳು ನಡೆಸಿ ಬಿಜೆಪಿ ಮುಖಂಡರಿಗೆ ಮಹಿಳೆಯರಿಗೆ ಕಾರ್ಯಕರ್ತರಿಗೆ ಹುರಿ ತುಂಬಿಸಿ ಕೆಲಸ ಮಾಡಿ ಇಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದೇ ಕರೆಯಲ್ಪಡುವ ಕೆಲಸ ಶಾಸಕ ಮುನಿರಾಜಣ್ಣಸಲ್ಲುತದೆ ನಾವು ಅವರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು ತಿಳಿಸುತ್ತೇವೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಎಚ್ ಎನ್ ಗಂಗಾಧರ್ ಮಾತಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ತಿಮ್ಮೇಗೌಡ, ಜಯರಾಮ, ವೈ.ಜಿ ನಾಗರಾಜ್, ವೆಂಕಟೇಶ್, ಮುನಿರಾಜು, ಶ್ರೀಧರ್, ಶ್ರೀನಿವಾಸ್,ಭಾರತ್, ವೆಂಕಟೇಶ್ ಯ್ಯ, ಲಿಝಿನ್, ಯೋಗೇಶ್, ಮಹಿಳೆಯರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!