Ad imageAd image

ಸರ್ಕಾರಿ ಆದೇಶ ಇದ್ದರು ಜಮೀನು ಬಳಸಲು ಗ್ರಾಮಸ್ಥರ ತೊಂದರೆ : ಮಾಜಿ ಸೈನಿಕನ ಗೋಳು

Bharath Vaibhav
ಸರ್ಕಾರಿ ಆದೇಶ ಇದ್ದರು ಜಮೀನು ಬಳಸಲು ಗ್ರಾಮಸ್ಥರ ತೊಂದರೆ : ಮಾಜಿ ಸೈನಿಕನ ಗೋಳು
WhatsApp Group Join Now
Telegram Group Join Now

ಕೋರ್ಟ್ ನಲ್ಲಿ ಗ್ರಾಮಸ್ಥರು ತೊಂದರೆ ನೀಡಬಾರದೆಂದು ಇದ್ದರು ಸಹ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಕೆಂಪಮ್ಮನ ಹೊಸೂರು ಗ್ರಾಮ ದ ಅಂಕನಹಳ್ಳಿ ಸರ್ವೇ ನಂಬರ್ 60/7 ಅನ್ನು ಮಾಜಿ ಸೈನಿಕ ಮಂಜುನಾಥ್ ಎಂಬುವವರಿಗೆ ಸರ್ಕಾರ 9994 ರಲ್ಲಿ ಜಮೀನು ನೀಡಿದ್ದು, ಇವರು ಸುಮಾರು 18 ವರ್ಷ 7 ತಿಂಗಳು ಸೈನಿಕರಾಗಿ ಸೇವೆ ಸಲ್ಲಿಸಿದ್ದು, ನಾನು ಸೈನಿಕ ನಾಗಿ ಸೇವೆಯಲ್ಲಿ ಇದ್ದಾಗ ಜಮೀನಿಗೆ ಬರಲು ಸಾಧ್ಯವಾಗದ ಕಾರಣ ನಮ್ಮ ತಂದೆ ತಾಯಿಯವರು ಇದನ್ನು ನೋಡಿಕೊಂಡು ಹೋಗುತ್ತಿದ್ದರು ನನಗೆ ರಿಟೈರ್ಮೆಂಟ್ ಆದಮೇಲೆ ನನಗೆ ಜೀವನ ನಡೆಸಲು ಈ ಜಮೀನೇ ಆಧಾರವಾಗಿರುವುದರಿಂದ ಇದರಲ್ಲಿ ವ್ಯವಸಾಯ ಮಾಡಲು ಜಮೀನಿಗೆ ಹೋದಾಗ ನಾನು ಜಮ್ಮುವಿನಲ್ಲಿ ಇದ್ದಗಲೇ ಈ ಜಾಗದಲ್ಲಿ ಮಣ್ಣನ್ನು ತೆಗೆದು ಗ್ರಾಮಸ್ಥರು ಮಾರಿಕೊಂಡಿರುತ್ತಾರೆ,

ಆದರೂ ಸಹ ತಲೆ ಕೆಡಿಸಿಕೊಳ್ಳದೆ ನಾನು ವ್ಯವಸಾಯ ಮಾಡಲು ನನ್ನ ಜಮೀನು ಬಳಿ ಬಂದಾಗ ಇಲ್ಲಿನ ಕೆಲವರು ಈ ಜಾಗ ನಮ್ಮ ಗ್ರಾಮಕ್ಕೆ ಬಿಟ್ಟುಕೋಡಿ ಎಂದು ಗಲಾಟೆ ಮಾಡಿದ್ದಾರೆ, ಹಾಗಾಗಿ ನಾನು ಕೊನೆಗೆ ಈ ಜಮೀನಿನ ಅಳತೆ ಮಾಡಿಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದಾಗ ಹಲವು ಬಾರಿ ಅಳತೆಗೆ ಅಧಿಕಾರಿಗಳು ಬಂದಾಗ ಅವರನ್ನು ತಡೆದು ನಮ್ಮ ಮೇಲೆ ಗಲಾಟೆ ಮಾಡುತ್ತಿದ್ದಾರೆ,

ಈ ಜಮೀನಿಗೆ ಸಂಬಂಧಿಸಿದಂತೆ ಹುಣಸೂರು ನ್ಯಾಯಾಲಯವು ಮಾಜಿ ಸೈನಿಕ ಮಂಜುನಾಥ್ ರವರ ಜಮೀನಿನ ಅನುಭೋಗಕ್ಕೆ ಯಾವುದೇ ತೊಂದರೆ ನೀಡಬಾರದು ಎಂದು ಆದೇಶ ನೀಡಿದ್ದರು ಸಹ ಗ್ರಾಮಸ್ಥರು ಪದೇ ಪದೇ ಬಂದು ಗಲಾಟೆ ಮಾಡಿ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ, ಹುಣಸೂರು ಉಪ ವಿಭಾಗಾಧಿಕಾರಿ ರವರು ಸಹ ಮಂಜುನಾಥ್ ರವರ ಜಮೀನಿನ ದಾಖಲೆಗಳು ಸರಿ ಇರುವುದರಿಂದ ಸರ್ವೇ ನಂಬರ್ 60/7 ರ ಜಮೀನು ಇವರ ಅನುಭವದಲ್ಲಿ ಇರತಕ್ಕದ್ದು ಎಂದು ಹೇಳಿದ್ದಾರೆ.

ಈ ಹಿಂದೆ ಅದೇ ಜಾಗದಲ್ಲಿ ಗ್ರಾಮದ ಕೆಲವರು ನನ್ನ ಜಮೀನಿನಲ್ಲಿ ಕೂಲಿಗಾಗಿ ಬರುತ್ತಿದ್ದರು ಆದರೂ ಸಹ ಇಂದು ನನ್ನ ಮೇಲೆ ತಿರುಗಿ ಬಿದ್ದು ಈ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ತೊಂದರೆ ನೀಡುತ್ತಿದ್ದಾರೆ, ಒಬ್ಬ ಮಾಜಿ ಸೈನಿಕನಿಗೆ ಜೀವನ ನಡೆಸಲು ಆಧಾರವಾಗಿರುವ ಜಮೀನಿನ ಮೇಲೆ ತೊಂದರೆ ನೀಡುತ್ತಿದ್ದು ಇನ್ನು ಸಾಮಾನ್ಯ ರೈತರ ಕಥೆ ಏನು, ದಯಮಾಡಿ ಸರ್ಕಾರದ ಅಧಿಕಾರಿಗಳು ಸೂಕ್ತ ಬಂದು ಬಂಧುಬಸ್ತ್ ನೀಡಿ ನನ್ನ ಜಮೀನಿನಲ್ಲಿ ಅಳತೆ ಮಾಡಿ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾಜಿ ಸೈನಿಕ ಮಂಜುನಾಥ್ ತಿಳಿಸಿದರು.

ವರದಿ. ಆನಂದ್ ಕುಮಾರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!