ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10ರಂದು ಅಪರೂಪದ ಚಿನ್ನದ ಆಭರಣ ನಿಧಿ ಪತ್ತೆಯಾದ ಬೆನ್ನಲ್ಲೇ ಸರ್ಕಾರ ಇಂದಿನಿಂದ ಉತ್ಖನನ ಪ್ರಾರಂಭಿಸಲು ಮುಂದಾಗಿದೆ.
ಮನೆ ಅಡಿಪಾಯ ತೆಗೆಯುವಾಗ ಸುಮಾರು ಅರ್ಧ ಕೆಜಿಯಷ್ಟು ಚಿನ್ನದ ಆಭರಣಗಳು ಸಿಕ್ಕಿದ್ದ ಲಕ್ಕುಂಡಿ ಈಗ ಎಲ್ಲರ ಗಮನ ಸೆಳೆದಿದೆ.
ಗ್ರಾಮದ ಕೋಟೆ ವೀರಭದ್ರೇಶ್ವರ ದೇವಾಲಯ ಮುಂಭಾಗ ಇಂದಿನಿಂದ ಉತ್ಖನನ ಕಾರ್ಯ ಆರಂಭವಾಗಲಿದ್ದು, ಅಧಿಕಾರಿಗಳು ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಾಲಯ ಮತ್ತು ಸಿದ್ದರ ಬಾವಿಗೆ ಸಂಪರ್ಕವಿತ್ತು ಎಂದು ಹೇಳಲಾಗಿದ್ದು, ಉತ್ಖನನ ನಡೆಯುವ ಸ್ಥಳದ ಪಕ್ಕದ ಖಾಲಿ ಜಾಗದಲ್ಲಿ ಈ ಹಿಂದೆ ಗ್ರಾಮದಲ್ಲಿ ನಾಟಕ ಪ್ರದರ್ಶನದ ವೇಳೆ ಭೂಮಿ ಅಗೆಯುವ ಸಂದರ್ಭದಲ್ಲಿ ಕಟ್ಟಡ ಅವಶೇಷಗಳು ಕಂಡುಬಂದಿದ್ದವು. ಅದೇ ಸ್ಥಳದಲ್ಲಿಗೆ ಉತ್ಖನನ ಆರಂಭವಾಗಲಿದೆ.




