ಕಿತ್ತೂರು: ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ ಅವರು ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ, ಸರ್ಕಾರಿ ಪ್ರೌಢ ಶಾಲಾ ಎಸ್.ಡಿ.ಎಂ.ಸಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ವತಿಯಿಂದ ಸೇವಾ ನಿವೃತ್ತಿಯಾದ ಪಿ.ಕೆ ಕಮ್ಮಾರವರಿಗೆ ಹಮ್ಮಿಕೊಂಡಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿ ಶಿಕ್ಷಕರಾದ ಪಿ.ಕೆ ಕಮ್ಮಾರ ದಂಪತಿಗಳಿಗೆ ಹೃದಯ ಪೂರ್ವಕ ಸನ್ಮಾನ ಮಾಡಿ ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮುಕ್ತವಾಗಿ ನಡೆಸಿದ ಸಂವಾದದಲ್ಲಿ ಮಾತನಾಡಿ ಶಿಥಿಲಗೊಂಡ ಶಾಲಾ ಕೊಠಡಿಗಳ ಪರಿಸ್ಥಿತಿ, ಕೈ ಗೊಂಡ ಕ್ರಮಗಳು, sslc ಮಕ್ಕಳ ಫಲಿತಾಂಶದ ಸುಧಾರಣೆಗೆ ಹಾಕಿಕೊಂಡ ಕ್ರಮಗಳು. ಖಾಸಗಿ ಶಾಲೆಗಳ ವಾಹನಗಳಲ್ಲಿ ಮಿತಿ ಮೀರಿ ಮಕ್ಕಳನ್ನು ಸಾಗಿಸುವಿಕೆ ಹೀಗೆ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಿದರು.
ವರದಿ: ಬಸವರಾಜು




