ಬೆಳಗಾವಿ : ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮದ್ಯ ಮತ್ತು ಸಾಗಾಟಕ್ಕೆ ಬಳಸಿದ GA 07 K 2046 ನಂಬರಿನ ಕಾರ ಹಾಗೂ KA 22 EL 9524 ನಂಬರಿನ ಸ್ಕೂಟಿ ಸೇರಿ ಒಟ್ಟು 2 ಲಕ್ಷ 50 ಸಾವಿರ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 750 ಮಿಲಿಯ 87 ಬಾಟಲಿಗಳನ್ನು (65.250 ಲೀ) ವಶಕ್ಕೆ ಪಡೆದಿದ್ದಾರೆ.
ಗೋವಾ ದಿಂದ ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಮದ್ಯವನ್ನು ದಾಳಿ ನಡೆಸಿ ಅಬಕಾರಿ ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಅಕ್ರಮವಾಗಿ ಸಂಗಹಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಅಧಿಕಾರಗಳ ತಂಡ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಅಧಿಕಾರಗಳು ಸ್ಪಷ್ಟಪಡಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಅಧಿಕ್ಷಕ ವಿಜಯ್ ಕುಮಾರ್ ಹಿರೇಮಠ, ಅಬಕಾರಿ ಉಪ ಅಧೀಕ್ಷಕ ರವಿ ಮುರುಗೋಡ್ ಹಾಗೂ ಅಬಕಾರಿ ನಿರೀಕ್ಷಕರಾದ ಮಹೇಶ್ ಪರಿಟ್, ಚಿದಾನಂದ ಹಾಗೂ ಕೆಲ ಸಿಬ್ಬಂದಿ ಭಾಗಿಯಾಗಿದ್ದರು.
ವರದಿ : ಉಮೇಶ ಗೌರಿ