Ad imageAd image

ಬೆಳಗಾವಿಯಲ್ಲಿ ಅಬಕಾರಿ ನಿಯಮಗಳು ಅಧ್ವಾನ: ಮುಂಜಾನೆ 6ಕ್ಕೇ ‘ಶಿರಾಲಕರ್’ ಮಳಿಗೆಯಲ್ಲಿ ಕುಡುಕರ ಅಡ್ಡ!

Bharath Vaibhav
ಬೆಳಗಾವಿಯಲ್ಲಿ ಅಬಕಾರಿ ನಿಯಮಗಳು ಅಧ್ವಾನ: ಮುಂಜಾನೆ 6ಕ್ಕೇ ‘ಶಿರಾಲಕರ್’ ಮಳಿಗೆಯಲ್ಲಿ ಕುಡುಕರ ಅಡ್ಡ!
WhatsApp Group Join Now
Telegram Group Join Now

ಬೆಳಗಾವಿ: ಇಲ್ಲಿನ ಅಬಕಾರಿ ಇಲಾಖೆ ಕುಂಭಕರ್ಣ ನಿದ್ದೆಗೆ ಜಾರಿದೆಯೇ ಅಥವಾ ಅಕ್ರಮಗಳ ಜೊತೆ ಕೈಜೋಡಿಸಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ನಗರದ ಶಾಹಪುರದ ಕಪಿಲೇಶ್ವರ ರಸ್ತೆಯಲ್ಲಿರುವ ‘ಶಿರಾಲಕರ್ ಆಂಡ್ ಸನ್ಸ್’ (Shiralkar & Sons) ಮದ್ಯದ ಅಂಗಡಿಯಲ್ಲಿ ಕಾನೂನು ಅನ್ನೋದು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ.


​ಜಿಪಿಎಸ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಲಿ ಬಣ್ಣ!
​ಬೆಳಿಗ್ಗೆ 10 ಗಂಟೆಗೆ ತೆರೆಯಬೇಕಾದ ಮಳಿಗೆಯು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ವ್ಯಾಪಾರ ಆರಂಭಿಸುತ್ತಿದೆ. ಲಭ್ಯವಿರುವ ಜಿಪಿಎಸ್ ಆಧಾರಿತ ಭಾವಚಿತ್ರದ ಪ್ರಕಾರ, ಶುಕ್ರವಾರ 27/03/2026 ರಂದು ಮುಂಜಾನೆ 06:18 ಗಂಟೆಗೆ ಶಾಹಪುರದ ಬಜಾಜ್ ಗಣಾಜ್ ಬಳಿಯಿರುವ ಈ ಮಳಿಗೆಯಲ್ಲಿ ಕುಡುಕರು ಆರಾಮವಾಗಿ ಕುಳಿತು ಮದ್ಯ ಸೇವಿಸುತ್ತಿರುವುದು ಸಾಕ್ಷ್ಯಸಹಿತ ಬಹಿರಂಗವಾಗಿದೆ. ಕಾರ್ಮಿಕರು ಕೆಲಸಕ್ಕೆ ಹೋಗುವ ಹೊತ್ತಿನಲ್ಲಿ ಇಂತಹ ಅಕ್ರಮ ದೃಶ್ಯಗಳು ಕಂಡುಬರುತ್ತಿರುವುದು ಆಘಾತಕಾರಿಯಾಗಿದೆ.
​ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ: ಸಾರ್ವಜನಿಕರ ಆಗ್ರಹ
​ಅಬಕಾರಿ ನಿಯಮಗಳ ಪ್ರಕಾರ ಸಿ.ಎಲ್-2 ಮಳಿಗೆಯಲ್ಲಿ ಕುಳಿತು ಕುಡಿಯಲು ಅವಕಾಶವಿಲ್ಲ, ಜೊತೆಗೆ ಸಮಯದ ಮಿತಿಯೂ ಇದೆ. ಆದರೆ ಇಲ್ಲಿ ಈ ಎರಡೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮದ್ಯದ ಮಾಲೀಕರು ನೀಡುವ ಲಂಚಕ್ಕೆ ಮರುಳಾಗಿ ಅಬಕಾರಿ ಅಧಿಕಾರಿಗಳು ಈ ಅಕ್ರಮವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದಾರೆಯೇ? ಕೂಡಲೇ ಸ್ಥಳೀಯ ಅಬಕಾರಿ ಅಧಿಕಾರಿಗಳು ಈ ಮಳಿಗೆಯ ಮೇಲೆ ದಾಳಿ ನಡೆಸಿ, ಇದರ ಲೈಸೆನ್ಸ್ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಅಬಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ನಿಶ್ಚಿತ.

ವರದಿ :ಸದಾಶಿವ ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!