Ad imageAd image

ಹಳೇಕೋಟೆ ಗ್ರಾಮದಲ್ಲಿ ಕುಂಭೋತ್ಸವ ನಿಮಿತ್ತ ಬಯಲಾಟಗಳ ಪ್ರದರ್ಶನ

Bharath Vaibhav
ಹಳೇಕೋಟೆ ಗ್ರಾಮದಲ್ಲಿ ಕುಂಭೋತ್ಸವ ನಿಮಿತ್ತ ಬಯಲಾಟಗಳ ಪ್ರದರ್ಶನ
WhatsApp Group Join Now
Telegram Group Join Now

ಸಿರುಗುಪ್ಪ : ತಾಲೂಕಿನ ನಂ.64 ಹಳೇಕೋಟೆ ಗ್ರಾಮದಲ್ಲಿ ಎಳ್ಳು ಅಮವಾಸ್ಯೆಯಂದು ಶಕ್ತಿ ದೇವತೆಗಳಾದ ಶ್ರೀ ಸುಂಕಲಮ್ಮ, ಶ್ರೀ ಮಾರೆಮ್ಮ ದೇವಿ ಕುಂಭೋತ್ಸವ ಅದ್ದೂರಿಯಾಗಿ ಜರುಗಿತು.

ಕುಂಭೋತ್ಸವ ನಿಮಿತ್ತ ರಾತ್ರಿ ಪಾಂಡುವಿಜಯ ಅರ್ಥಾತ್ ಕೀಚಕನ ವಧೆ ಹಾಗೂ ಊರ್ವಶಿಯ ಶಾಪ ಅರ್ಥಾತ್ ಕಾಲಕೇಯರ ಸಂಹಾರ ಎಂಬ ಬಯಲು ನಾಟಕಗಳು ಗ್ರಾಮದ ಎರಡು ಕಡೆ ಪ್ರದರ್ಶನಗೊಂಡವು.

ಗಂಡು ಮೆಟ್ಟಿದ ಕಲೆ ಬಳ್ಳಾರಿಯ ಬಯಲಾಟ(ದೊಡ್ಡಾಟ)ದಲ್ಲಿ ಬಾಲಕೃಷ್ಣ ಪಾತ್ರದಾರಿಯಾಗಿ ಪಾಂಡುವಿಜಯ ನಾಟಕದಲ್ಲಿ ಅನುಪ ಎಂಬ 9ವರ್ಷದ ಬಾಲಕಿ ಅಭಿನಯಿಸುತ್ತಿರುವುದು ಈ ಬಯಲಾಟದ ವಿಶೇಷವಾಗಿತ್ತು.

ಸಾಮಾನ್ಯ ಹೆಣ್ಣು ಮಗುವಿನ ಅಭಿನಯ ಹಾಗೂ ಒಬ್ಬರಿಗಿಂತ ಒಬ್ಬರಂತೆ ಪಾತ್ರಾಧಾರಿಗಳ ಅಬ್ಬರದ ಮಾತುಗಳ ಕಲೆಯ ಪ್ರದರ್ಶನ ಯಶಸ್ವಿಯಾಗಿ ಮೂಡಿಬಂದಿತು.

ಹಾರ್ಮೋನಿಯಂ ಮಾಸ್ಟರ್ ಎಮ್.ಸೂಗೂರು ಗ್ರಾಮದ ಗುರುಸ್ವಾಮಿ ಅವರ ನಿರ್ದೇಶನದ ಪಾಂಡುವಿಜಯ ನಾಟಕದಲ್ಲಿ ಮಹಿಳಾ ಕಲಾವಿದೆಯರಾಗಿ ಕಮಲಮ್ಮ ದ್ರೌಪದಿ ಪಾತ್ರದಲ್ಲಿ ದೀಪಾ ಅವರು ಪದ್ಮಗಂದಿ, ಸುಧೀಷ್ಣಾ, ಬಾನಾಮತಿ ಪಾತ್ರದಲ್ಲಿ ನರ್ತಿಸಿದರು.

ಸಾರಥಿಯಾಗಿ ಎಮ್ಮಿಗನೂರು ಜಡೇಶ ನೆರೆದವರ ಮನರಂಜಿಸಿದರು. ವ್ಯವಸ್ಥಾಪಕರಾಗಿ ಹಾವಿನಾಳ್ ಮೂಕಣ್ಣ, ತಳವಾರ ವೀರೇಶ, ಮುಸೇರ್ ಅಂಜಿನಿ, ದೊಡ್ಡ ನಾಗಪ್ಪ, ಕೊಂಡಯ್ಯ ಮಾರ್ಗದರ್ಶನ ನೀಡಿದರು.

ಊರ್ವಶಿಯ ಶಾಪ ನಾಟಕಕ್ಕೆ ಬಲಕುಂದಿ ಶೀನಪ್ಪ ಅವರು ಹಾರ್ಮೋನಿಯಂ ಹಾಗೂ ಕಥಾ ನಿರ್ದೇಶನ ನೀಡಿದರೆ ಬಸವರಾಜ ತಬಲಾ ಸಾಥ್ ನೀಡಿದರು. ಮಹಿಳಾ ಕಲಾವಿದೆಯರಾದ ಅಂಬುಜಾ ದ್ರೌಪದಿಯಾಗಿ, ವೈಟ್‌ಸುಮಾ ರಂಭಾ, ಸುಮಾ ಊರ್ವಶಿಯಾಗಿ ನರ್ತಿಸಿದರು.

ಏಕಕಾಲಕ್ಕೆ ಎರಡು ಕಡೆ ಬಯಲಾಟವಿದ್ದರಿಂದ ಬಯಲಾಟ ಕಲಾಸಕ್ತಿಯುಳ್ಳ ಸುತ್ತಮುತ್ತಲಿನ ಗ್ರಾಮಗಳ ಜನರು ನೆರೆದು ಪಾತ್ರದಾರಿಗಳ ಅಭಿನಯವನ್ನು ಕಣ್ತುಂಬಿಕೊಂಡರು.

ಇದೇ ವೇಳೆ ನಾಟಕ ವ್ಯವಸ್ಥಾಪಕರಾದ ಎಮ್.ವೆಂಕಟೇಶ, ಹೆಚ್.ವೀರಭದ್ರ, ಆದೆಪ್ಪ, ಹಾಗೂ ಮುಖಂಡರಾದ ಆದೆಪ್ಪ, ಗಾದಿಲಿಂಗ ಹಾಗೂ ಗ್ರಾಮಸ್ಥರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!