ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಗೆ ದುಬಾರಿ ಗ್ಯಾರಂಟಿ : ಬಿಜೆಪಿ ವಾಗ್ದಾಳಿ 

Bharath Vaibhav
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಗೆ ದುಬಾರಿ ಗ್ಯಾರಂಟಿ : ಬಿಜೆಪಿ ವಾಗ್ದಾಳಿ 
WhatsApp Group Join Now
Telegram Group Join Now

ಬೆಂಗಳೂರು: ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡಿಸಿ ಈಗ ಜನಸಾಮಾನ್ಯರು ಮುಟ್ಟಿದ್ದಕ್ಕೆಲ್ಲಾ ದರ ಏರಿಕೆ ಮಾಡುತ್ತಿರುವ ಕಾಂಗ್ರೆಸ್ ನ ವಕ್ರದೃಷ್ಟಿ ಈಗ ಮೆಟ್ರೋ ಸಾರಿಗೆ ಮೇಲೆ ಬಿದ್ದಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಆಡಳಿತದಲ್ಲಿ ಮೆಟ್ರೋ ಎನ್ನುವುದು ಕಾಗದಕ್ಕೆ ಸೀಮಿತವಾಗಿತ್ತು.ಬಿಜೆಪಿ ಸರ್ಕಾರದಿಂದ ಬೆಂಗಳೂರಿಗರ ಮೆಟ್ರೋ ಕನಸು ನನಸಾಗಿತ್ತು. ಈಗ ಮೆಟ್ರೋ ಟಿಕೆಟ್ ದರ ಏರಿಸಿ ಜನಸಾಮಾನ್ಯರ ಲೂಟಿ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದೆ.

ಬಸ್ ಟಿಕೆಟ್ ದರದ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಶೇ. 20 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟ ಹಾಗೆ ನಟಿಸಿ, ಮತ್ತೊಂದು ಕೈಯಿಂದ ದುಪ್ಪಟ್ಟು ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!