ಬೆಂಗಳೂರು: ಹೃದಯಾಘಾತ ತಡೆದು ಜೀವದಾನ ನೀಡುವಲ್ಲಿ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಗಮನಾರ್ಹ ಯಶಸ್ಸು ಕಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಈ ವರ್ಷವೇ ಯೋಜನೆ ವಿಸ್ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ರಾಜ್ಯದ 71 ತಾಲೂಕು ಆಸ್ಪತ್ರೆ ಸೇರಿ 86 ಆಸ್ಪತ್ರೆಗಳಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಎದೆ ನೋವಿನಿಂದ ಆಸ್ಪತ್ರೆಗೆ ಬಂದ 11,000 ಜನರಲ್ಲಿ ಗಂಭೀರವಾದ ಸಮಸ್ಯೆ ಪತ್ತೆ ಮಾಡಲಾಗಿದೆ. ಅವುಗಳಲ್ಲಿ ಜೀವ ರಕ್ಷಕ ಇಂಜೆಕ್ಷನ್ ಟೆನೇಕ್ಟೆಪ್ಲೇಸ್ ಮೂಲಕ ಗಂಭೀರ ಹಂತದಲ್ಲಿದ್ದ 10 ಮಂದಿಯ ಜೀವ ಉಳಿಸಲಾಗಿದೆ.
ಗ್ರಾಮೀಣ ಮತ್ತು ಪಟ್ಟಣ ವ್ಯಾಪ್ತಿಗಳಲ್ಲಿ ಹೃದಯಾಘಾತ ತಡೆದು ಜೀವದಾನ ನೀಡುವಲ್ಲಿ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಯಶಸ್ಸು ಕಂಡಿದೆ. ಜನರ ರಕ್ಷಿಸುವ ಮಹತ್ವದ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುವುದು.
ಹೃದಯಾಘಾತದ ವೇಳೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಟೆನೇಕ್ಟೆಪ್ಲೇಸ್ ಇಂಜೆಕ್ಷನ್ ಅನ್ನು ಈ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.