Ad imageAd image
- Advertisement -  - Advertisement -  - Advertisement - 

ವಿದ್ಯಾರ್ಥಿಗಳಿಗೆ ಪಠ್ಯದ ಜೋತೆಗೆ ಪಠೆತ್ತರ ಚಟುವಟಿಕೆಗಳು ಅವಶ್ಯ– ರಾಜೇಶ್ವರಿ ಕಳಸಣ್ಣವರ

Bharath Vaibhav
ವಿದ್ಯಾರ್ಥಿಗಳಿಗೆ ಪಠ್ಯದ ಜೋತೆಗೆ ಪಠೆತ್ತರ ಚಟುವಟಿಕೆಗಳು ಅವಶ್ಯ– ರಾಜೇಶ್ವರಿ ಕಳಸಣ್ಣವರ
WhatsApp Group Join Now
Telegram Group Join Now

ಚೆನ್ನಮ್ಮನ ಕಿತ್ತೂರು :-ಜಿಲ್ಲಾ ಪಂಚಾಯತಿ ಬೆಳಗಾವಿ ,ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಬೆಳಗಾವಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಕಿತ್ತೂರು. ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕಿತ್ತೂರು ‌ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಿತ್ತೂರಿನ ರಾಜಗುರು ಶಾಲೆಯಲ್ಲಿ ಜರುಗಿತು.

ಕಿತ್ತೂರು ತಾಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ. ಕನ್ನಡ ಹಾಗೂ ಇಂಗ್ಲಿಷ್ ಭಾಷಣ, ಧಾರ್ಮಿಕ ಪಠಣ ಸಂಸ್ಕೃತ ಹಾಗೂ, ಜಾನಪದ ಗೀತೆ, ಭಾವಗೀತೆ ಮತ್ತು ಭಕ್ತಿ ಗೀತೆ, ಭರತನಾಟ್ಯ, ಚಿತ್ರ ಕಲೆ, ಚರ್ಚಾ ಸ್ಪರ್ಧೆ, ರಂಗೋಲಿ, ಕವ್ವಾಲಿ, ಕ್ವಿಜ್, ಇತರೆ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

BSM ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀ ಮತಿ ರಾಜೇಶ್ವರಿ ಕಳಸಣ್ಣವರ ಅವರು ಬಿ ವಿ ನ್ಯೂಸ್ ಜೋತೆ ಮಾತನಾಡಿ ಎಲ್ಲ ವಿದ್ಯಾರ್ಥಿಗಳಿಗೂ ಪಠ್ಯದ ಜೋತೆಗೆ ಪಠೆತ್ತರ ಚಟುವಟಿಕೆಗಳಿಗೂ ಅವ್ಯಶ ಇದೆ ಇದರ ಉಪಯೋಗವನ್ನು ಏಲ್ಲರೂ ತೆಗೆದುಕೊಳ್ಳಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ ಎಂದು ಹೇಳಿದರು.

ರಾಜಗುರು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ದಿನಾ ಲಂಗೋಟಿ ಅವರು ಮಾತನಾಡಿ ಮಕ್ಕಳು ಬಹಳ ಉತ್ಸಾಹದಿಂದ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಎಂದು ಹೇಳಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮ ಭಾಗವಹಿಸಿದ ಮಕ್ಕಳಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಾಗಿ ಆಯ್ಕೆ ಮಾಡಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿದರು

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು. ಕಿತ್ತೂರು ರಾಜಗುರು ಶಾಲೆಯ ಎಲ್ಲ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು.ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಯ ಶಿಕ್ಷಕರು ಶಿಕ್ಷಿಕಯರು ಭಾಗವಹಿಸಿದ್ದರು.‌

ವರದಿ- ಬಸವರಾಜ ಭೀಮರಾಣಿ.ಜಗದೀಶ ಕಡೋಲಿ.

WhatsApp Group Join Now
Telegram Group Join Now
Share This Article
error: Content is protected !!