Ad imageAd image

ನಕಲಿ ರಾಯಭಾರಿ ಕಚೇರಿ ತೆರೆದ ಭೂಪ : ಜನ ಕಂಗಾಲು, ಲಕ್ಷಾಂತರ ಹಣ ವಶಕ್ಕೆ

Bharath Vaibhav
ನಕಲಿ ರಾಯಭಾರಿ ಕಚೇರಿ ತೆರೆದ ಭೂಪ : ಜನ ಕಂಗಾಲು, ಲಕ್ಷಾಂತರ ಹಣ ವಶಕ್ಕೆ
WhatsApp Group Join Now
Telegram Group Join Now

ಲಖನೌ : ಉತ್ತರ ಭಾರತದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ಕಂಡು ನಗಬೇಕೋ ಅಳಬೇಕೋ‌ ಗೊತ್ತಾಗಲ್ಲ. ಅದರಲ್ಲೂ ಉತ್ತರ ಪ್ರದೇಶ, ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚು. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ದುರ್ಬೀನು‌ ಹಾಕಿ‌ ಹುಡುಕಿದರೂ ಸಿಗದ, ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ದೇಶಗಳ ರಾಜತಾಂತ್ರಿಕ ಅಧಿಕಾರಿ ಎಂದು ಹೇಳಿಕೊಂಡು ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌ ಎಂಬಾತನನ್ನು STF ಅಧಿಕಾರಿಗಳು ಬಂಧಿಸಿದ್ದಾರೆ‌.

ಹರ್ಷವರ್ಧನ್ ಜೈನ್ ಘಾಜಿಯಾಬಾದ್‌ನ ಕವಿ ನಗರಕ್ಕೆ ಸೇರಿದವನಾಗಿದ್ದು, ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ವಂಚಿಸಿದ್ದಾನೆ. ನಕಲಿ ಕಂಪನಿಗಳ ಮೂಲಕ ಹವಾಲಾ ದಂಧೆಯಲ್ಲಿಯೂ ಹರ್ಷವರ್ಧನ್ ಜೈನ್ ಭಾಗಿಯಾಗುದ್ದಾನೆ ಎಂದು ಹೇಳಲಾಗುತ್ತಿದೆ.

 

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!