Ad imageAd image

ವೀರ ಯೋಧನಿಗೆ ಅಂತಿಮ ನಮನ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Bharath Vaibhav
ವೀರ ಯೋಧನಿಗೆ ಅಂತಿಮ ನಮನ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
WhatsApp Group Join Now
Telegram Group Join Now

ಐಗಳಿ : ತಾಲೂಕಿನ ಐಗಳಿ ಗ್ರಾಮದ ವೀರಯೋಧ ಕಿರಣರಾಜ್ ಕೇದಾರಿ ತೆಲಸಂಗ (೨೩) ಪಂಜಾಬ್‌ನ ಪಟಿಯಾಲ್ ರೆಜೀಮೆಂಟ್‌ದಲ್ಲಿ ೧೫ ತಿಂಗಳಿAದ ಅಗ್ನಿವೀರ ಸೇವೆಗೆ ಸೇರಿದ ಸೇವೆಯಲ್ಲಿರುವಾಗಲೇ ಸೈನಿಕ ಕಿರಣರಾಜ್ ತೆಲಸಂಗ ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದನು.


ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಗುರುವಾರ ಮದ್ಯಾಹ್ನ ೧ ಗಂಟೆಗೆ ಅಥಣಿ ಪಟ್ಟಣಕ್ಕೆ ಆಗಮಿಸಿ, ತಾಲೂಕಾ ಆಡಳಿತ ಹಾಗೂ ಮಾಜಿ ಸೈನಿಕರ ಸಂಘದಿAದ ಪುಷ್ಪ ನಮನ ಗೌರವ ಸಲ್ಲಿಸಿದ ನಂತರ ಹಲ್ಯಾಳ ರಸ್ತೆಯ ನೀರಿನ ಟ್ಯಾಂಕ್‌ದಿAದ ಶಿವಯೋಗಿ ವೃತ್ತದ ಮಾರ್ಗವಾಗಿ ಸಂಗೋಳ್ಳಿ ರಾಯಣ್ಣನ ವೃತ್ತದವರೆಗೆ ಅಂತಿಮ ಯಾತ್ರೆ ಮೂಲಕ ಐಗಳಿ ಗ್ರಾಮಕ್ಕೆ ಬಿಳ್ಕೊಡಲಾಯಿತು. ಅಥಣಿಯಿಂದ ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಕೋಹಳ್ಳಿ ಈ ಗ್ರಾಮಗಳಲ್ಲಿ ಗ್ರಾಪಂ ಆಡಳಿತದಿಂದ ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ನಂತರ ಕೋಹಳ್ಳಿ ಗ್ರಾಮದಿಂದ ಐಗಳಿ ಸ್ವ-ಗ್ರಾಮಕ್ಕೆ ಆಗಮಿಸುತ್ತಿದ್ದ ವಾಹನವನ್ನು ಗ್ರಾಮಸ್ಥರು, ಶಾಲಾ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ವಿಜೃಂಭಣೆಯಿಂದ ಸ್ವಾಗತಿಸಿದರು. ಆದರ್ಶ ಶಾಲೆಯಲ್ಲಿ ಅಂತಿಮ ದರ್ಶನ ಪಡೆಯಲು ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಸೇರಿದ್ದರು. ಬೋಲೋ ಭಾರತ ಮಾತಾಕಿ ಜೈ, ಒಂದೇ ಮಾತರಂ, ಕಿರಣರಾಜ್ ಅಮರ್ ರಹೇ ಎಂಬ ಜಯಘೋಷಣೆ ಮುಗಿಲು ಮುಟ್ಟಿತ್ತು.
ಮುಗಿಲು ಮುಟ್ಟಿದ ಆಕ್ರಂದನ : ಸೈನಿಕನ ತಂದೆ ಕೇದಾರಿ, ತಾಯಿ ರೇಣುಕಾ, ಅಜ್ಜ ಸತ್ಯಪ್ಪ, ಅಜ್ಜಿ ಯಲ್ಲವ್ವ, ಅಣ್ಣ ರವಿ, ಸಹೋದರಿ ನಿವೇದಿತಾ ಹಾಗೂ ಬಂಧು ಬಳದವರ ರೋಧನ ಮುಗಿಲು ಮುಟ್ಟಿತ್ತು. ಕಿರಣರಾಜ್‌ನ ಮೃತದೇಹ ಹೊತ್ತು ವಾಹನ ಗ್ರಾಮದಲ್ಲಿ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರ ದುಃಖ, ಆಕ್ರಂದನ ಕರಳು ಚಿರ್ ಎನಿಸುವಂತಿತ್ತು. ತಂದೆ-ತಾಯಿ, ತಮ್ಮ ಮಗನ ಮುಖದರ್ಶನ ಮಾಡುವಾಗ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯ ಕರಳು ಕರಗಿ ನೀರಾಗುವಂತಿತ್ತು.
ಈ ಘಟನೆಯಿಂದ ಮನೆಯ ಕಳಶವೇ ಮುರಿದಂತಾಗಿದೆ ಆದರೆ ದೇಶ ಸೇವೆಯಲ್ಲಿಯೇ ಪ್ರಾಣ ಕಳೆದುಕೊಂಡ ಮಗನನ್ನು ಕಂಡು ಹೆಮ್ಮೆ ಎನಿಸುತ್ತದೆ ಎಂದು ತಂದೆ ಕೇದಾರಿ ತೆಲಸಂಗ ದುಃಖವನ್ನು ನುಂಗಿ ಗಟ್ಟಿಧನಿಯಲ್ಲಿ ತೋಡಿಕೊಂಡನು.
ಬಳಿಕ ಸರಕಾರಿ ಸಕಲ ಗೌರವದೊಂದಿಗೆ ಸ್ವ-ತೋಟದಲ್ಲಿ ಸಂಜೆ ೫-೩೦ ಗಂಟೆಗೆ ಅಂತ್ಯಸAಸ್ಕಾರ ಮಾಡಲಾಯಿತು. ಅಂತ್ಯ ಸಂಸ್ಕಾರದಲ್ಲಿ ಅಥಣಿಯ ಶೆಟ್ಟರಮಠದ ಮುರುಳಸಿದ್ದ ಸ್ವಾಮಿಜೀ, ತೆಲಸಂಗ ಹಿರೇಮಠದ ವಿರೇಶ ದೇವರು, ಕಂಮಾಡೋರುಗಳಾದ ಪಂಜಾಬದ ಪಟಿಯಾಲ್ ರೆಜೀಮೆಂಟ್ ನಾಯಕ ಸುಭೇಧಾರ ಜಾಪರ್, ನಾಯಕ ಪ್ರದೀಪ್, ಹವಾಲ್ದಾರ್ ಚವ್ಹಾಣ, ನಾಯಕ ಸುಭೇದಾರ ಸುರೇಶ, ಅಥಣಿ ತಾಲೂಕಾ ಮಾಜಿ ಸೈನಿಕದ ಸಂಘದ ಅಧ್ಯಕ್ಷ ಹೊನಗೌಡ ಪಾಟೀಲ, ವಿಜಯಪೂರ ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಲ್. ಕೆ. ರಾಮಪ್ಪ, ಐಗಳಿ ಗ್ರಾಪಂ ಅಧ್ಯಕ್ಷ ಶಕುಂತಲಾ ಪಾಟೀಲ, ಗ್ರಾಮದ ಹಿರಿಯರಾದ ಸಿ. ಎಸ್. ನೇಮಗೌಡ, ಆದರ್ಶ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎ. ಎಸ್. ತೆಲಸಂಗ, ವಿಜಯಪೂರ ಸೈನಿಕ ತರಬೇತಿ ಕೇಂದ್ರದ ಮುಖ್ಯಸ್ಥ ಕಲ್ಮೇಶ ಆಸಂಗಿ, ತಾಪಂ ಇಒ ಶಿವಾನಂದ ಕಲ್ಲಾಪೂರ, ಮಾಜಿ ಶಾಸಕರಾದ ಶಹಜಹಾನ್ ಡೊಂಗರಗಾAವ, ಮಹೇಶ ಕುಮಠಳ್ಳಿ, ಮುಖಂಡರಾದ ಗಿರೀಶ ಬುಟಾಳೆ, ಗಜಾನನ ಮಂಗಸೂಳಿ, ಸತೀಶ ಕೋಳಿ ಸೇರಿದಂತೆ ಅಥಣಿ, ಯಲಿಹಡಲಗಿ, ಯಕ್ಕಂಚಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಕೊಕಟನೂರ, ತೆಲಸಂಗ, ಕಕಮರಿ, ಕೊಟ್ಟಲಗಿ, ಅರಟಾಳ, ಬಾಡಗಿ ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ ಸಾಗನೂರ ಹಾಗೂ ಸಿಬ್ಬಂದಿಗಳು ಬಂದೂಬಸ್ತ ಮಾಡಿದರು.
ಅಥಣಿ ತಾಲೂಕಿನ ಎಲ್ಲ ಗ್ರಾಮಸ್ಥರು ಹಾಗೂ ಮಾಜಿ ಸೈನಿಕರು, ಗಣ್ಯರು ಸೇರಿ ಶೃದಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!