ಅಥಣಿ:ಮೊಳೆ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಹಸು-ಗುಸು ಸಾವನ್ನಪ್ಪಿರುವ ಘಟನೆಯೊಂದು ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಭರಮಣಕೊಡಿ ಮೂಲದ ಮಗುವಿಗೆ ನಿನ್ನೆ ಮೊಳೆ PHC ವ್ಯಾಪ್ತಿಯ ನರ್ಸ್ ಗಳಿಂದ ಪೋಲಿಯೋ, ಪೇಂಟಾ 1, ಐ ಪಿ ವಿ 1, ಪಿವಿಸಿ 1,ರೋಟಾ 1, ವೈರಸ್ ಡ್ರಾಪ್ ನೀಡಲಾಗಿತ್ತು, ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅಥಣಿ ಖಾಸಗಿ ಆಸ್ಪತ್ರೆ ಮಗುವನ್ನ ದಾಖಲಿಸಲಾಗಿತ್ತು, ನಂತರ ಮಗುವನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ . ಅಷ್ಟರಲ್ಲೇ ಮಗು ಉಸಿರು ಚೆಲ್ಲಿದೆ.
ಮಗು ಕಳೆದುಕೊಂಡ ಕುಟುಂಬಸ್ಥರು ಡೋಸ್ ನೀಡಿದ ವೈದ್ಯರ ನಿರ್ಲಕ್ಷವೆ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಲಸಿಕೆ ನೀಡಿದ ಪರಿಣಾಮ ಮಗು ಸವಣ್ಣಪ್ಪಿದೆ ಎಂದು ಮಗು ಕುಟುಂಬಸ್ಥರು ಸರ್ಕಾರಿ ವೈದ್ಯರ ವಿರುದ್ದ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಏನು ಅರಿಯದ ಹಸು-ಗುಸು ತಾಯಿಯಿಂದ ದೂರಾಗಿದೆ. ಯಾರದೋ ಎಡವಟ್ಟಿನಿಂದ ಮಗುವಿನ ಕುಟುಂಬ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ.
ವರದಿ :ಅಜಯ್ ಕಾಂಬಳೆ