Ad imageAd image

ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ಮಠ, ಎದ್ದೇಳು ಮಂಜುನಾಥ ಮುಂತಾದ ಚಿತ್ರಗಳ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇದುವರೆಗೂ ತಿಳಿದು ಬಂದಿಲ್ಲ.

ಇತ್ತೀಚಿಗಷ್ಟೇ ಸಾಲಗಾರರ ಕಾಟದಿಂದ ಬೇಸತ್ತಿದ್ದ ಗುರುಪ್ರಸಾದ ಅವರ ಕಿರುಕುಳದಿಂದ ನೊಂದಿದ್ದರು ಎನ್ನಲಾಗಿದೆ. ಹೀಗಾಗಿ ಬೇಸತ್ತು ನಗರದ ಹೊರವಲಯದಲ್ಲಿ ಫ್ಲಾಟ್‌ ಖರೀದಿಸಿ ಅಲ್ಲಿ ವಾಸವಾಗಿದ್ದರು. ಅವರ ಇತ್ತೀಚಿನ ರಂಗನಾಯಕ ಸಿನಿಮಾ ದಯನೀಯವಾಗಿ ಸೋತಿತ್ತು. ಇದರಿಂದ ಅವರು ವಿಪರೀತವಾಗಿ ನೊಂದಿದ್ದರು.

ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್‌ ಟಿ.ಎನ್‌. ಸೀತಾರಾಂ ಅವರ ಗರಡಿಯಲ್ಲಿ ಪಳಗಿದ್ದರು. ಮಠ ಚಿತ್ರ ಅವರನ್ನು ಕನ್ನಡದ ಚಿತ್ರರಂಗದಲ್ಲೇ ಖ್ಯಾತರನ್ನಾಗಿ ಮಾಡಿತ್ತು.

ಅಷ್ಟೇ ಅಲ್ಲದೇ ಅವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿತ್ತು. ಎದ್ದೇಳು ಮಂಜುನಾಥ, ಡೈರೆಕ್ಟರ್‌ ಸ್ಪೆಷಲ್‌ ಮತ್ತಿತರ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುಪ್ರಸಾದ್‌ ತಮ್ಮ ಮುಂಗೋಪದಿಂದಾಗಿ ನಿಷ್ಟುರವಾದಿ ಎಂದು ಹೆಸರನ್ನೂ ಗಳಿಸಿದ್ದರು.

ನಟ ಜಗ್ಗೇಶ್‌ ಅವರೊಂದಿಗೆ ಜಗಳ, ನಟ ಡಾಲಿ ಧನಂಜಯ್‌ ಜೊತೆಗಿನ ವಿವಾದ, ಮೀಟೂ ವಿವಾದದಲ್ಲಿ ಅವರು ನೀಡಿದ್ದ ಹೇಳಿಕೆ, ಅವರ ದಾಂಪತ್ಯ ಕಲಹ ಹಾಗೂ ಹಣದ ವಿಷಯದಲ್ಲಿ ಅವರು ಕೆಲವರೊಂದಿಗೆ ಮಾಡಿಕೊಂಡಿದ್ದ ಜಗಳಗಳು ಅವರನ್ನು ವಿವಾದಾಸ್ಪದ ನಿರ್ದೇಶಕರ ಪಟ್ಟಿಗೆ ಸೇರಿಸಿದ್ದವು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!