ಮೆಕ್ಕಾ : ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಅಭಿಮಾನಿಯೊಬ್ಬರು ಮುಸ್ಲಿಮರ ಯಾತ್ರಾಸ್ಥಳ ಮೆಕ್ಕಾದಲ್ಲಿ ಪ್ರಾರ್ಥನೆ ಸಲ್ಲಿಸಿರುವ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಯೂತ್ ಕಾಂಗ್ರೆಸ್ ನ ಉಪಾಧ್ಯಕ್ಷ ರಿಜ್ವಾನ್ ಪಾಷಾ ಪ್ರಾರ್ಥನೆ ಸಲ್ಲಿಸಿರುವ ವ್ಯಕ್ತಿಯಾಗಿದ್ದು, ಈ ವಿಡಿಯೋ ಈಗ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ವೈರಲ್ ಆಗಿದೆ.
ಡಿ.ಕೆ.ಸಹೋದರ ಪೋಟೋ ಹಿಡಿದು ಪ್ರಾರ್ಥನೆ ಸಲ್ಲಿಸಿರುವ ರಿಜ್ವಾನ್ ಪಾಷಾ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಿಎಂ ಆಗಬೇಕು . ಡಿ.ಕೆ.ಸಹೋದರರು ಇಬ್ಬರೂ ನನಗೆ ಎರಡು ಕಣ್ಣುಗಳಿದ್ದಂತೆ.
ಇಬ್ಬರು ದೊಡ್ಡ ನಾಯಕರು. ರಾಹುಲ್ ಗಾಂಧಿ ಅವರು ಡಿ.ಕೆ. ಶಿವಕುಮಾರ್ ರನ್ನ ಸಿಎಂ ಮಾಡಬೇಕು ಎಂದು ಮೆಕ್ಕಾದಲ್ಲಿ ನಿಂತು ಪ್ರಾರ್ಥನೆ ಮಾಡಿರುವುದಾಗಿ ಹೇಳಿದ್ದಾರೆ.ತಮ್ಮ ಮೊಬೈಲ್ ನಲ್ಲಿ ಇಬ್ಬರ ಫೋಟೋ ಹಿಡಿದು ಪ್ರದರ್ಶಿಸುತ್ತಾ ಪ್ರಾರ್ಥನೆ ಸಲ್ಲಿಸಿರುವುದಾಗಿ ರಿಜ್ವಾನ್ ಹೇಳಿದ್ದಾರೆ.




