ಉಪ್ಪಲ್ ಮೈದಾನದಲ್ಲಿ ನಿನ್ನೆ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತೋರಿರುವ ವರ್ತನೆ ಫ್ಯಾನ್ಸ್ಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಬುಮ್ರಾ ಓವರ್ನಲ್ಲಿ ಸಿಕ್ಸರ್ ಬಾರಿಸಿದರು. ಅದರ ನಂತರ, ಬುಮ್ರಾ ಫುಲ್-ಟಾಸ್ ಬೌಲ್ ಮಾಡಿದರು. ಆಗ ಚೆಂಡು ನೇರವಾಗಿ ಅಭಿನವ್ ಹೊಟ್ಟೆಗೆ ತಾಕಿತು. ಇದರಿಂದ ಅಭಿನವ್ ಕುಸಿದು ಕೆಳಬಿದ್ದರು. ಬಳಿಕ ಚೇತರಿಸಿಕೊಂಡು ಬ್ಯಾಟಿಂಗ್ ಮಾಡಲು ಸಿದ್ಧರಾದರು. ಆದರೆ, ಅಭಿನವ್ ಕೆಳಬಿದ್ದರೂ, ಬುಮ್ರಾ ಏನಾಯಿತು ಎಂದು ವಿಚಾರಿಸದೇ ಮತ್ತೆ ಬೌಲಿಂಗ್ ಮಾಡಲು ಹೋದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್ಗಳ ಆಕ್ರೋಶಕ್ಕೆ ಕಾರಣವಾಗಿದೆ. ಬುಮ್ರಾ ಅವರ ವರ್ತನೆಯ ಬಗ್ಗೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನೆಟ್ಟಿಗರೊಬ್ಬರು ‘ಬುಮ್ರಾ, ನೀವು ತೋರಿರುವ ವರ್ತನೆ ಸರಿಯಾಗಿಲ್ಲ. ನಿಮ್ಮ ಈ ವರ್ತನೆಯನ್ನು ಹಲವು ಬಾರಿ ಗಮನಿಸಿದ್ದೇವೆ. ಯಾರಾದರೂ ತಮ್ಮ ಬೌಲಿಂಗ್‌ನಲ್ಲಿ ಸಿಕ್ಸ್ ಬಾರಿಸಿದರೆ ಬುಮ್ರಾ ಕೋಪಗೊಳ್ಳುತ್ತಾರೆ. ಇದಕ್ಕೂ ಮೊದಲು, ಕರುಣ್ ನಾಯರ್ ವಿರುದ್ಧವೂ ಇದೇ ರೀತಿ ವರ್ತಿಸಿದ್ದರು.