ಮೈಸೂರು : ಹೈಕಮಾಂಡ್ ವಾರ್ನಿಂಗ್ ನಡುವೆಯೂ ಘರ್ಜಿಸುತ್ತಿರುವ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಇಂದು ಮೈಸೂರಿಗೆ ಆಗಮಿಸಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆದು ವಾಪಸಾಗಿದ್ದಾರೆ.
ಸದಾ ಬಿವೈ ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿದ್ದ ಶಾಸಕ ಯತ್ನಾಳ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು, ಯತ್ನಾಳ್ ಗೆ ಕೆಲ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಇನ್ನು ಯತ್ನಾಳ್ ದೇವಿಯ ದರ್ಶನ ಮುಗಿಸಿ ವಾಪಸ್ ಆಗುವ ವೇಳೆ ಬಿಎಸ್ ವೈ, ಬಿವೈವಿ ಅಭಿಮಾನಿಗಳು ಜೈ ವಿಜಯೇಂದ್ರ, ಜೈ ಯಡಿಯೂರಪ್ಪ ಎಂದು ಕೂಗಿದ್ದು, ಈ ವೇಳೆ ತೀವ್ರ ಮುಜುಗರ ಉಂಟಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿ ಅಲ್ಲಿಂದ ಹೋಗಿದ್ದಾರೆ.
ಇನ್ನು ಗುರುವಾರ ಯತ್ನಾಳ್ ನೇತೃತ್ವದ ರೆಬಲ್ ಟೀಂ ಸಭೆ ನಡೆಸಿದ್ದು, ಈ ಸಭೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಎಂಬುದರ ಕುರಿತಾಗಿ ಎಲ್ಲ ಅಭಿಪ್ರಾಯ ವ್ಯಕ್ತವಾಗಿ ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.




