ಚೊಳಚಗುಡ್ಡ :
ನವಚೇತನ್ ಎಜ್ಯುಕೇಶನ್ ಸೊಸೈಟಿ ಚೊಳಚುಗುಡ್ಡ ಇದರ ಅಡಿಯಲ್ಲಿ ನಡೆದ ಶಾಕoಭರೀ ವಿದ್ಯಾನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಚೊಳಚುಗುಡ್ಡ.
2024 ಮತ್ತು 25ನೇ ಸಾಲಿನ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಡಾಕ್ಟರ್ ಗಿರೀಶ ನಾಗನಗೌಡ ದಾನಪ್ಪಗೌಡರ ಗೌರವ ಕಾರ್ಯದರ್ಶಿಗಳು ನವಚೇತನ ಏಜ್ಯುಕೇಶನ್ ಸೊಸೈಟಿ ಇವರು ವಹಿಸಿಕೊಂಡಿದ್ದರು. ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಬಸವರಾಜ ಮುಲ್ಕಿ ಪಾಟೀಲ,, ನಿರ್ದೇಶಕರುಗಳಾದಂತಹ ಮಹೇಶಗೌಡ ತಲೆಗೌಡರ, ಡಾ ಸಿದ್ಧನಗೌಡ ಪಾಟೀಲ,, ಡಾ ಶಂಕರಗೌಡ ಸಂಕದಾಳ, ಡಾ ಕ್ರಾಂತಿ ಕಿರಣ ಸರ್, ಬಾಲು ಹಳ್ಳಿ ಶಿಕ್ಷಣ ಸಂಯೋಜಕರು ಕುಳಗೇರಿ ವಲಯ, ರಮೇಶ್ ಶಹಬಾದ್, ಎಂ ಎಂ ಬೆಳವಣಿಕಿ,, ಪ್ರಶಾಂತ ಪಡಿಯಪ್ಪನವರ ಸೇರಿದಂತೆ ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ಪೈಲ್ವಾನ್ ಚಿತ್ರದ ಬಾಲ ನಟಿ ಶರ್ವರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೆಯೇ ಚೊಳಚಗುಡ್ಡ ಗ್ರಾಮದ ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ದಂಪತಿಗಳಿಗೆ ಸನ್ಮಾನಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಾಯಿತು. ಶಿಕ್ಷಕರಾದ ಆರ್ ಎಲ್ ಲಮಾಣಿ ನಿರೂಪಿಸಿದರು, ಸಂತೋಷ್ ಹುಂಬಿ ಸ್ವಾಗತಿಸಿದರು,, ನಾಗರಾಜ್ ಗಂಜಿಹಾಳ ವಂದಿಸಿದರು.
ವರದಿ:- ರಾಜೇಶ್. ಎಸ್. ದೇಸಾಯಿ




