ಹೊಸಪೇಟೆ: ವಿಜಯನಗರ ಜಿಲ್ಲಾ ಪಂಚಾಯಿತಿ ಸಿ ಇ ಒ ಸದಾಶಿವ ಪ್ರಭು ಅವರಿಗೆ ಶನಿವಾರ ಸಂಜೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದಿವಾಕರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ನಗರದಲ್ಲಿ ಸಹಾಯಕ ಆಯುಕ್ತರಾಗಿದ್ದ ಮೊಹಮ್ಮದ್ ಅಲಿ ಅಕ್ರಮ್ ಅವರು ವಿಜಯನಗರ ಜಿಲ್ಲಾ ಪಂಚಾಯಿತಿ ನೂತನ ಸಿ ಇ ಒ ಆಗಿ ಅಧಿಕಾರ ವಹಿಸಿಕೊಂಡರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವಾಕರ್ ಮಾತನಾಡಿ, ಸದಾಶಿವ ಪ್ರಭು ಅವರು ಜಿಲ್ಲೆಯ ಗ್ರಾಮೀಣಾಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಿದ್ದು, ಸರಕಾರಿ ನೌಕರರು ವರ್ಗಾವಣೆಯಾಗುವುದು ಸಹಜ, ಆದರೆ ನಾವು ವೃತ್ತಿಯಲ್ಲಿ ಇರುವವರೆಗೆ ನಮ್ಮಲ್ಲಿರುವ ಸೇವೆಗಳು ಮಾಡಿದವರು ಬಹುಕಾಲ ಜನರ ನೆನಪಿನಲ್ಲಿ ಉಳಿಯುತ್ತಾರೆ ಎಂದರು
ನಂತರ ಮಾತನಾಡಿದ ಸದಾಶಿವ ಪ್ರಭು ಅವರು ಸುಮಾರು 14 ತಿಂಗಳ ಕಾಲ ಜಿಲ್ಲಾ ಪಂಚಾಯಿತಿ ಅಧಿಕಾರಿಯಾಗಿ ವಿಜಯನಗರ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಿದ್ದೇನೆ ವಿಜಯನಗರ ಜಿಲ್ಲೆಯ ಜನರು, ಅಧಿಕಾರಿಗಳು, ಸಿಬ್ಬಂದಿ ನನ್ನ ಮೇಲೆ ತೋರಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ನಂತರ ನೂತನ ಜಿಲ್ಲಾ ಪಂಚಾಯ್ತಿ ಅಧಿಕಾರಿ ಮಹಮ್ಮದ್ ಅಲಿ ಅಕ್ರಮ್ ಶಾ ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆ ನಿವಾರಣೆಗೆ ಹಾಗೂ ಎಲ್ಲ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.ಈ ಸಂಧರ್ಭದಲ್ಲಿ ಸದಾಶಿವ ಪ್ರಭು ಪತ್ನಿ ಗೀತಾ, ಅಧಿಕಾರಿಗಳು ಪಾಲ್ಗೊಂಡರು