ಮೊಳಕಾಲ್ಮುರು: ಸಾರ್ವಜನಿಕ ಸೇವೆಯ ದಿನಗಳಲ್ಲಿ ಅಧಿಕಾರಿಗಳಲ್ಲಿ ಸರಳತೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ನಿವೃತ್ತಿ ನಂತರವೂ ಜನತೆಯಿಂದ ಸದಾ ಗೌರವ ಸಿಗಲಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಕರಿಸಿದೆ ಎಂದು ನಿವೃತ್ತಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ.ಸಂತೋಷ್ ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಡಿ.ಕೆ.ಆರ್ ಗ್ರೂಪ್ ಹಾಗೂ ತಾಲೂಕಿನ ಪ್ರಗತಿ ಪರ ಸಂಘಟನೆಗಳ ಮುಖಂಡರು ಏರ್ಪಡಿಸಿದ್ದ ವೃತ್ತ ಅಡಿಶಿನಲ್ ಎಸ್ ಪಿ ಯಾಗಿ ನಿವೃತ್ತರಾದ ವಿಜಯ ಕುಮಾರ್ ಎಂ.ಸಂತೋಷ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಪೋಲಿಸ್ ವೃತ್ತ ನಿರೀಕ್ಷಕರಾಗಿ ಪ್ರಥಮ ಬಾರಿಗೆ ಅಧಿಕಾರ ವಹಿಸಿಕೊಂಡ ವೇಳೆ ನಾಗಸಮುದ್ರ ಗ್ರಾಮದಲ್ಲಿ ಬ್ಯಾಂಕ್ ಒಂದರ ದರೋಡೆ ನಡೆದಿತ್ತು.
ಆಂಧ್ರ ಪ್ರದೇಶದಲ್ಲಿ ಆರೋಪಿಗಳನ್ನು
ಹೆಡೆ ಮುರಿ ಕಟ್ಟುವಲ್ಲಿ ನನ್ನ ಸಿಬ್ಬಂದಿಗಳೊಂದಿಗೆ ಅಂದು ದಿಟ್ಟ ಕೆಲಸ ನಿರ್ವಹಿದ್ದೆ .ಕಠಿಣ ಸಂದರ್ಭದಲ್ಲಿ ಜನರು ಸದಾ ಸಹಕಾರ ನೀಡಿದ್ದಾರೆ ಎಂದು ಕರ್ತವ್ಯದ ದಿನಗಳನ್ನು ನೆನಪು ಮಾಡಿಕೊಂಡ ಅವರು
ಬಹುತೇಕ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ನಿರ್ವಹಿಸಿರುವ ನನಗೆ ತಾಲೂಕಿನಲ್ಲಿ ಪ್ರಥಮ ಬಾರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು.ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಸರಳತೆ ಇದ್ದರೆ ಸಾರ್ವಜನಿಕ ಬದುಕಲ್ಲಿ ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ಸಾಕ್ಷಿಕರಿಸಿದೆ.ನನ್ನ ಮೇಲೆ ನೀವುಗಳು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಆದರಣೀಯ ಎಂದರು.
ಸಂದರ್ಭದಲ್ಲಿ ದಾವಣಗೆರೆ ಆಡಿಶಿನಲ್ ಎಸ್ ಪಿ ಮಂಜುನಾಥ ಮಾತನಾಡಿ ಕರ್ತವ್ಯದ ಅವಧಿಯಲ್ಲಿ ಉತ್ತಮ ಸೇವೆ ನೀಡಿದರೆ ಜನ ಮಾನಸದಲ್ಲಿ ಸದಾ ಉಳಿಯಲಿದೆ.
ಸೇವೆಯ ಅವಧಿಯಲ್ಲಿ ಗಳಿಸಿದ ಪ್ರೀತಿ ಶಾಶ್ವತವಾಗಿ ಇರಲಿದೆ.ಈ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಜನರು ಉತ್ತಮ ಸಹಕಾರ ನೀಡುತ್ತಾರೆ.ವಿಜಯ್ ಕುಮಾರ್ ಎಂ.ಸಂತೋಷ್ ಅವರು ತಾಲೂಕಿನಲ್ಲಿ ಎರಡು ಬಾರಿ ವೃತ್ತ ನಿರೀಕ್ಷಕೆರಾಗಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.ಅವರಲ್ಲಿರುವ ಸರಳತೆ ಮತ್ತು ಪ್ರೀತಿ ಜನರ ಮನದಲ್ಲಿ ಸದಾ ನೆಲೆಸಿದ್ದಾರೆ.ಅವರ ನಿವೃತ್ತಿ ಬದುಕು ಇನ್ನಷ್ಟು ಸುಖಮಯವಾಗಿರಲಿ ಎಂದು ಹಾರೈಸಿದರು.
ಸಂದರ್ಭದಲ್ಲಿ ಪೋಲಿಸ್ ವೃತ್ತ ನಿರೀಕ್ಷಕ ವಸಂತ ವಿ ಅಸೋದೆ,ಡಿಕೆಆರ್ ಗ್ರೂಪ್ ನ ಮಾಲಿಕರಾದ ಎಂ.ಡಿ.ಮಂಜುನಾಥ್,ಗ್ರಾಪಂ ಅಧ್ಯಕ್ಷ ಎಸ್ ಜಯಣ್ಣ,ನಿವೃತ್ತ ಶಿಕ್ಷಕ ಸಣ್ಣಯಲ್ಲಪ್ಪ, ಚಲನ ಚಿತ್ರ ನಿರ್ದೇಶಕ ಶ್ರೀನಿವಾಸ ಮೂರ್ತಿ,ನಾಗರಾಜ ಬಿ. ಟಿ.ನಾಗಭೂಷಣ ಇದ್ದರು.
ಚಿತ್ರಶೀರ್ಷಿಕೆ22ಎಂಎಲ್ ಕೆ1ಮೊಳಕಾಲ್ಮುರು ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ತಾಲೂಕಿನಲ್ಲಿ ವೃತ್ತ ಪೋಲಿಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಅಡಿಶಿನಲ್ ಎಸ್ ಪಿ ಯಾಗಿ ನಿವೃತ್ತರಾದ ವಿಜಯ ಕುಮಾರ್ ಎಂ.ಸಂತೋಷ್ ಅವರ ಬೀಳ್ಕೊಡುಗೆ ಸಮಾರಂಭವನ್ನು ವಿಜಯ ಕುಮಾರ್ ಎಂ.ಸಂತೋಷ್ ಉದ್ಘಾಟಿಸಿದರು.
ವರದಿ: ಪಿಎಂ ಗಂಗಾಧರ




