ದಕ್ಷಿಣ ಕೊರಿಯಾದ ಜನಪ್ರಿಯ ನಟಿ ಕಿಮ್ ಸೇ ರಾನ್ ತನ್ನ 24 ನೇ ವಯಸ್ಸಿನಲ್ಲಿಯೇ ಜಗತ್ತಿಗೆ ವಿದಾಯ ಹೇಳಿದ್ದಾರೆ. ಇಂದು ನಟಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಿಮ್ ಸೆ ರಾನ್ ಅವರ ಮೃತದೇಹ ಸಿಯೋಲ್‌ನ ಸಾಂಗ್‌ಡಾಂಗ್-ಗು ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ.ನಟಿಗೆ ಪರಿಚಿತ ವ್ಯಕ್ತಿಯೊಬ್ಬರು ಸಂಜೆ 4:50 ಕ್ಕೆ ತುರ್ತು ಸೇವೆಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಪಿತೂರಿ ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಯಾವುದೇ ಅಪರಾಧ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸಾವಿಗೆ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.
ಕಿಮ್ ಸೇ ರಾನ್ ಅವರು ‘ಬ್ಲಡ್‌ಹೌಂಡ್ಸ್’, ‘ಲಿವರೇಜ್’, ‘ಮಿರರ್ ಆಫ್ ದಿ ವಿಚ್’, ‘ಟು ಬಿ ಕಂಟಿನ್ಯೂಡ್’ ಮತ್ತು ‘ಹೈಸ್ಕೂಲ್ – ಲವ್ ಆನ್’ ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದರು. ಅಂತಹ ಅನೇಕ ಪ್ರದರ್ಶನಗಳಲ್ಲಿ ಅವರ ಪಾತ್ರಗಳು ಜನಮನ ಸೆಳೆದಿದ್ದವು. ಇದೀಗ ನಟಿಯ ಹಠಾತ್ ನಿಧನ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.