ವಿಜಯಪುರ :ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರಾಗಿದ್ದು ತಮ್ಮ ಸ್ವಂತ ಒಂದು ಹೆಕ್ಟರ್ ಜ ಮೀನಿನಲ್ಲಿ ಹನಿ ನೀರಾವರಿ ಮೂಲಕ ಹೆಚ್ಚು ರೇಷ್ಮೆ ಬೆಳೆದಿರುತ್ತಾರೆ. ಇವರ ತೋಟಕ್ಕೆ ಬಸವನ ಬಾಗೇವಾಡಿಯ ಶ್ರೀ ಎಸ್ ಐ ಗೋಲ್ಗುಂಡ ರೇಷ್ಮೆಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ಮಾಡಿದರು.
ಆನಂತರ ಆದಿಲಶಾ ಮಕಾಂದಾರ್ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ನಾನು ಈವರೆಗೆ ಹಲವಾರು ಬೆಳೆ ಬೆಳೆದು ಕೈಸುಟ್ಟುಕೊಂಡಿದ್ದೇನೆ ಆದರೆ ರೇಷ್ಮೆ ಅಧಿಕಾರಿಗಳ ಸಲಹೆ ಸೂಚನೆಯ ಮೇರೆಗೆ ರೇಷ್ಮೆ ಬೆಳೆದು ಒಳ್ಳೆಯ ಆದಾಯ ಪಡೆದಿದ್ದೇನೆ ಎಂದು ಹೇಳಿದರು.
ರೇಷ್ಮೆ ಅಧಿಕಾರಿಗಳಾದ ಶ್ರೀ ಎಸ್ ಐ ಗೋಲಗುಂಡ ಅವರು ಮಾಧ್ಯಮದವರ ಜೊತೆಗೆ ನಮ್ಮ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಹಲವಾರು ಸೌಲಭ್ಯಗಳು ಇರುತ್ತವೆ ಅವುಗಳ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ರೈತರು BV5 ನ್ಯೂಸಗೆ ಕರೆ ನೀಡಿದರು.
ವರದಿ: ಕೃಷ್ಣಾ ರಾಠೋಡ




