ಕಲಬುರಗಿ: ಕಲ್ಬುರ್ಗಿ ಜಿಲ್ಲೆ ಕಾಳಗಿ ಪಟ್ಟಣದಲ್ಲಿ ರೈತ.ದಲಿತ.ಕನ್ನಡ ಹೋರಾಟ ಸಮಿತಿ ಕಾಳಗಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ನಮ್ಮ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ತತ್ತರಿಸಿ ಬೆಳೆ ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ.

ಹೀಗಾಗಿ ಜಿಲ್ಲೆಯನ್ನು ಕೂಡಲೇ ಹಸಿ ಬರಗಾಲವಾಗಿ ಘೋಷಣೆ ಮಾಡಬೇಕು’ ಎಂದು ರೈತ, ದಲಿತ, ಕನ್ನಡ ಸಂಘಟನೆಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.ಪಟ್ಟಣದಲ್ಲಿ ಶನಿವಾರ ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಂಡು ಕಲಬುರಗಿ-ಚಿಂಚೋಳಿ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದರು’ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ಕೊಡಬೇಕು. ಕಲಬುರಗಿ ಜಿಲ್ಲೆಗೆ ₹1,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಂದು ರೈತ ಮುಖಂಡರಾದ ವೀರಣ್ಣ ಗಂಗಾಣೆ ತಿಳಿಸಿದ್ದಾರೆ.
ವರದಿ: ಸುನಿಲ್ ಸಲಗರ




