ಸೇಡಂ: ತಾಲೂಕಿನ ಪಾಖಲಾ ಗ್ರಾಮದಲ್ಲಿ ಹಾವು ಕಚ್ಚಿ ರೈತ ಕಾಶಪ್ಪ ಪೆದ್ಧಿಂಟಿ (48) ಅವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆಗೆ ಕಾರಣ ದಿನಸಿ ಕೆಲಸಕ್ಕಾಗಿ ತನ್ನ ಹೊಲಕ್ಕೆ ಔಷಧಿ ಹೊಡೆಯಲು ಹೋಗಿದ್ದ ರೈತನೊಬ್ಬ ಹಾವು ಕಚ್ಚಿ ಅಕಾಲಿಕ ಮರಣ ಹೊಂದಿದ್ದಾನೆ.
ಈ ರೈತನಿಗೆ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗು ಇರುತ್ತಾರೆ. ಈ ದುರ್ಘಟನೆಯ ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಅನಿಲ್ ಪೊಟೇಲ್ ಅವರು ಮೃತ ರೈತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಗ್ರಾಮಸ್ಥರ ಆರೋಪದಂತೆ ಅವರು: “ಹೊಲಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸರಿಯಾದ ದಾರಿಯಿಲ್ಲದ ಕಾರಣದಿಂದ ರೈತನೇ ಆಮ್ಲೆಗೆ ಸಿಲುಕಿದ್ದಾನೆ. ಸರಿಯಾದ ರಸ್ತೆ ಇದ್ದಿದ್ದರೆ ಇಂತಹ ದುರ್ಘಟನೆ ಸಂಭವಿಸಲು ಸಾದ್ಯವಿರುತ್ತಿಲ್ಲ.

ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಕೆಲಸದ ಇಲಾಖೆಗೆ ತೀವ್ರ ಎಚ್ಚರಿಕೆ ನೀಡಿ, ಕೂಡಲೇ ಪಾಖಲಾ ಗ್ರಾಮಕ್ಕೆ ಹೋಗುವ ರಸ್ತೆಯನ್ನು ನಮ್ಮ ಹೊಲ ನಮ್ಮ ರಸ್ತೆ ಅಡಿಯಲ್ಲಿ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯುತ್ತಾ, ಮೃತ ರೈತನ ಕುಟುಂಬಕ್ಕೆ ತಕ್ಷಣ ಪರಿಹಾರವನ್ನು ಘೋಷಿಸಬೇಕು ಎಂದು ತೀವ್ರ ಆಗ್ರಹ ವ್ಯಕ್ತಪಡಿಸಿದರು.
“ಇನ್ಮುಂದೆ ರಸ್ತೆಗಳ ಅವ್ಯವಸ್ಥೆಯಿಂದಾಗಿ ರೈತರು ಅಥವಾ ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗಬಾರದು. ನಾವು ರೈತರೊಂದಿಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ರಸ್ತೆ ಸಾರಿ ಇದ್ದಿದ್ದಾರೆ ರೈತನ ಸಾವು ತಪ್ಪಿಸಬಹುದಾಗಿತ್ತು.
ಈ ಹಿಂದೆ ಸಂಬಂಧಪಟ್ಟ ಇಲಾಖೆಗೆ ಅನೇಕ ಬಾರಿ ವೈಯಕ್ತಿಕ ಮತ್ತು ಪತ್ರಿಕಾ ಪ್ರಕಟಣೆ ಮುಖಾಂತರ ಕೂಡ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಈಗಲಾದರೂ ಸಂಬಂಧಪಟ್ಟ ಇಲಾಖೆಯು ಕ್ರಮ ಕೈಗೊಂಡು ರಸ್ತೆ ಸುಧಾರಣೆ ಮಾಡಬೇಕು ಎಂದು ಗ್ರಾಮಸ್ಥರಾದ ಬಾಲಸ್ವಾಮಿ ಗೌಡ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




