ಪಾವಗಡ : ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು. ದಿನಾಂಕ, 09/06/25 ಸೋಮವಾರರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಆಫೀಸ್ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಹಸಿರು ಸೇನೆ ಸಂಘದ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ ಮಾತನಾಡಿ. ಪಾವಗಡ ಪಟ್ಟಣದಲ್ಲಿ ಬರುವ ಹೊಸ ಬಸ್ ಸ್ಟಾಂಡ್ ಪಕ್ಕದ ಹತ್ತಿರ ಹೂವಿನ ಮಾರಾಟ ಮಾಡುತ್ತಿದ್ದಲ್ಲಿ ಈಗ ಸದರಿ ಹೂ ಮಾರಾಟ ಮಾಡುವುದಕ್ಕೆ ಮಂಡಿಯನ್ನು ಕೊಳಚೆ ಪ್ರದೇಶಕ್ಕೆ ಪಾವಗಡ ಪುರಸಭೆಯ ಮುಖ್ಯಧಿಕಾರಿಗಳು ಬದಲಾವಣೆ ಮಾಡಿದ್ದು ಸದರಿ ಹೂವಿನ ಮಾರಾಟ ಮಾಡುವ ಜನಾಂಗವು ಕೊಳಚೆ ಪ್ರದೇಶ ವಾಗಿದ್ದು ದುರ್ವವಾಸನೆಯಿಂದ ಕೂಡಿದ್ದು ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಜನರಿಗೆ ರೋಗಗಳು ಬರುತ್ತಿರುವುದರಿಂದ ತಾವುಗಳು ದಯವಿಟ್ಟು ಹೂವು ಮಾರಾಟ ಮಾಡುವವರನ್ನು ಯತಾಸ್ಥಿತಿ ಈ ಹಂದೆ ಎಲ್ಲಿ ಮಾರಾಟ ಮಾಡುತ್ತಿದ್ದರೋ ಅಲ್ಲಿಗೆ ಅವರಿಗೆ ಸ್ಥಳವಾಕಾಶ ಕಲ್ಪಿಸಿ ಕೊಡಬೇಕು ಇಲ್ಲವಾದರೆ ಪುರಸಭೆ ಕಛೇರಿಯ ಮುಂದೆ ಧರಣಿ ನಡೆಸಲಾಗುವುದು ಎಚ್ಚರಿಕೆ ನೀಡಿ ಆದರೆ ತಾವು ಹೂವು ಮಾರಾಟಗಾರರ ಈ ಹಿಂದೆ ಎಲ್ಲಿ ಮಾರಾಟ ಮಾಡುತ್ತಿದ್ದರೋ ಅಲ್ಲಿಗೆ ಅವರನ್ನು ವ್ಯಾಪಾರ ಮಾಡಲು ಅನುಕೂಲ ಮಾಡಬೇಕು ರೈತರು ಬೆಳಿಗ್ಗೆ 7.ಗಂಟೆ ಯಿಂದ ಮಧ್ಯಾಹ್ನ 10 ಗಂಟೆಯ ವರೆಗೆ ಪುರಸಭೆಯವರು ತೊಂದರೆ ಮಾಡಬಾರದು ತಿಳಿಸಿರುತ್ತಾರೆ.
ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಮಾತನಾಡಿ ಹೂವು ಮಾರಾಟ ಮಾಡುವವರನ್ನು ಯತಾಸ್ಥಿತಿ ಈ ಹಂದೆ ಎಲ್ಲಿ ಮಾರಾಟ ಮಾಡುತ್ತಿದ್ದರೋ ಅಲ್ಲಿಗೆ ಅವರಿಗೆ ಸ್ಥಳವಾಕಾಶ ಕಲ್ಪಿಸಿ ರೈತರಿಗೆ ತೊಂದರೆ ಕೊಡಬಾರದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಹೂವು ಮಾರಾಟ ಮಾಡುವವರಿಗೆ ಅನುಕೂಲ ಮಾಡಬೇಕೆಂದು ಎಂದು ತಿಳಿಸಿದರು.
ನಂತರ. ಕರ್ನಾಟಕ ಹಸಿರು ಸೇನಾ ರೈತ ಸಂಘ ವತಿಯಿಂದ ತಹಶೀಲ್ದಾರ್ ವರದರಾಜ್ ರವರಿಗೆ ಮನವಿ ಪತ್ರವನ್ನು ನೀಡಿರುತ್ತಾರೆ. ಇದೇ ವೇಳೆಯಲ್ಲಿ ಮನವಿ ಪತ್ರವನ್ನು ತೆಗೆದುಕೊಂಡು ತಹಸಿಲ್ದಾರ್ ವರದರಾಜ್ ಮಾತನಾಡಿ ಕರ್ನಾಟಕ ಹಸಿರು ಸೇನೆ ರೈತ ಸಂಘ ವತಿಯಿಂದ ಇವತ್ತು ನನಗೆ ಮನವಿ ಪತ್ರವನ್ನು ನೀಡಿದ್ದೀರಾ ಹೂವು ಮಾರಾಟಗಾರರ ಸಮಸ್ಯೆ ವಿಚಾರವಾಗಿ. ಬಗೆಹರಿಸುವುದಕ್ಕೆ ಪುರಸಭೆ ಕಾರ್ಯಾಲಯ ಕಚೇರಿಗೆ ತಿಳಿಸಿ ಮುಖ್ಯ.ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಹೂವು ಮಾರಾಟಗಾರರಿಗೆ ಅನುಕೂಲ ಕಲ್ಪಿಸುತ್ತೇವೆಂದು ಎಂದು ಹೇಳಿದ್ದಾರೆ.
ಈ ವೇಳೆ ಪ್ರತಿಭಟನೆಗೆ ಭಾಗವಹಿಸಿದವರು. ರೈತ ಸಂಘದ ತಾಲೂಕ್ ಅಧ್ಯಕ್ಷ ಶಿವ. ರೈತ ಸಂಘದ ಮುಖಂಡರು ಹಾಗೂ ಪದಾಧಿಕಾರಿಗಳರಾದ. ರಾಮಾಂಜಿ. ಗೋಪಾಲ. ವೀರಭದ್ರಪ್ಪ. ಮರಿಜನ್. ದುರ್ಗಪ್ಪ. ಹನುಮಂತರಾಯಪ್ಪ. ಸದಾಶಿವಪ್ಪ. ಲಕ್ಷ್ಮಣ್ ನಾಯಕ್. ಇನ್ನು ಮುಂತಾದ ರೈತ ಸಂಘದ ಮುಖಂಡರಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.
ವರದಿ : ಶಿವಾನಂದ




